ಉಡುಪಿ: ಕರ್ನಾಟಕ ರಾಜ್ಯ ಗ್ರಾಮೀಣ ಜೀವಾನೋಪಾಯ ಅಭಿಯಾನ-ಸಂಜೀವಿನಿ ಬೆಂಗಳೂರು ಇದರ ಅಪರ ಅಭಿಯಾನ ನಿರ್ದೇಶಕರಾದ ಶ್ರೀನಿವಾಸ್ ಎಂ. ಅವರು ಉಡುಪಿಯ ಜಿಲ್ಲೆಯ ಸಂಜೀವಿನಿ ಸೂಪರ್ ಮಾರ್ಕೆಟ್‌ಗೆ ರವಿವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸುತ್ತಿರುವ ಉತ್ಪನ್ನಗಳ ಬಗ್ಗೆ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಹಾಗೂ ಈ ಮಾರುಕಟ್ಟೆ ಯನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ (ಎಚ್.ಆರ್) ಪ್ರಭಾಕರ್ ಆಚಾರ್ ,ಉಡುಪಿ ಜಿಲ್ಲೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಯುವ ವೃತ್ತಿಪರರಾದ ರವಿ ಹಾಗೂ ಶಿವಾನಂದ್ ಉಪಸ್ಥಿತರಿದ್ದರು.
Comments are closed.