ಶಬರಿಮಲೆ: ಶಬರಿಮಲೆ ಅಯ್ಯಪ್ಪ ಸ್ವಾಮಿ ತೀರ್ಥಯಾತ್ರೆಯ ಋತುವಿನಲ್ಲಿ ದರ್ಶನಕ್ಕಾಗಿ ವರ್ಚುವಲ್ ಕ್ಯೂ ಬುಕಿಂಗ್ ಶನಿವಾರ (ನವೆಂಬರ್ 1) ಸಂಜೆ 5 ಗಂಟೆಗೆ ಪ್ರಾರಂಭವಾಗಿದೆ.

ಯಾತ್ರಾರ್ಥಿಗಳುhttp://sabarimalaonline.org ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ಒಂದು ದಿನದಲ್ಲಿ 70,000 ಭಕ್ತರಿಗೆ ಭೇಟಿ ನೀಡಲು ಅವಕಾಶವಿದೆ.
ಇದಲ್ಲದೆ ವಂಡಿಪೆರಿಯಾರ್ ಸತ್ರಂ, ಎರುಮೇಲಿ, ನೀಲಕ್ಕಲ್ ಮತ್ತು ಪಂಪಾದಲ್ಲಿ ಸ್ಪಾಟ್ ಬುಕಿಂಗ್ ಲಭ್ಯವಿದೆ. ಸ್ಪಾಟ್ ಬುಕಿಂಗ್ ಮೂಲಕ ಒಂದು ದಿನದಲ್ಲಿ 20 ಸಾವಿರ ಭಕ್ತರು ಭೇಟಿ ನೀಡಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.
ಮಂಡಲ ಪೂಜೆಯ ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಶಬರಿಮಲೆ ದೇವಾಲಯವು ಭಾರತದ ದಕ್ಷಿಣ ರಾಜ್ಯಗಳಿಂದ ಮಾತ್ರವಲ್ಲದೆ, ದೇಶದ ಇತರ ಭಾಗಗಳು ಮತ್ತು ವಿದೇಶಗಳಿಂದಲೂ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ನವೆಂಬರ್ ನಿಂದ ಜನವರಿ ವರೆಗಿನ ಮುಖ್ಯ ಯಾತ್ರಾ ಋತುವಿನಲ್ಲಿ ಈ ದೇವಾಲಯವು ಭಕ್ತರಿಂದ ತುಂಬಿರುತ್ತದೆ. ಈ ವರ್ಷದ ಶಬರಿಮಲೆ ಯಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
Comments are closed.