ಕುಂದಾಪುರ: ಕರಾವಳಿಯಲ್ಲಿ ಹೈಕೋರ್ಟ್ ಸ್ಥಾಪನೆಗೆ ಒತ್ತಾಯಿಸಿ ದ.ಕ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಕೀಲರ ಸಂಘಗಳಿಂದ ನಡೆಯುತ್ತಿರುವ ಅಂಚೆ ಕಾರ್ಡ್ ಚಳವಳಿಯ ಭಾಗವಾಗಿ ಕುಂದಾಪುರದಲ್ಲೂ ಪತ್ರ ಚಳವಳಿ ಶುಕ್ರವಾರ ನಡೆಯಿತು.

ನಗರದ ಹೆಚ್ಚುವರಿ ಜಿಲ್ಲಾಮತ್ತು ಸೆಷನ್ಸ್ ನ್ಯಾಯಾಲಯದ ಅವರಣದಲ್ಲಿರುವ ಕುಂದಾಪುರ ತಾಲೂಕು ವಕೀಲರ ಸಂಘದ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 295 ಅಂಚೆ ಕಾರ್ಡ್ ಗಳನ್ನು ಕೇಂದ್ರ ಸರಕಾರದ ಕಾನೂನು ಸಚಿವಾಲಯಕ್ಕೆ ಕಳುಹಿಸಲಾಯಿತು.
ಈ ಬಹುಕಾಲದ ಬೇಡಿಕೆಗೆ ಎಲ್ಲ ಪಕ್ಷಗಳ ನಾಯಕರೂ ಬೆಂಬಲ ನೀಡಿದ್ದಾರೆ. ಈ ಭಾಗದಿಂದಬಹಳಷ್ಟು ವ್ಯಾಜ್ಯಗಳು ಕೋರ್ಟ್ಗೆ ಹೋಗುತ್ತಿದ್ದು ಈ ನಿಟ್ಟಿನಲ್ಲಿ ಪ್ರತಿ ವಿಚಾರಣೆಗೂ ಬೆಂಗಳೂರಿಗೆ ತೆರಳುವಂತಾಗಿದೆ. ಇದರಿಂದ ಅವರ ಖರ್ಚು ವೆಚ್ಚಗಳು ಹೆಚ್ಚಿದೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಭಾಗದ 6,000 ಪ್ರಕರಣಗಳು ಹೈಕೋರ್ಟ್ನಲ್ಲಿವೆ. ಧಾರವಾಡ, ಕಲಬುರ್ಗಿ ಮಾದರಿಯಲ್ಲಿ ಕರಾವಳಿಯಲ್ಲೂ ಹೈಕೋರ್ಟ್ ಪೀಠವಾದರೆ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಕುಂದಾಪುರ ಬಾರ್ಎಸೋಸಿಯೇಷನ್ ಅಧ್ಯಕ್ಷ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಗಿಳಿಯಾರು ಉಪಸ್ಥಿತರಿದ್ದರು.
Comments are closed.