ಕರಾವಳಿ

ಯುವಕನಿಂದ ಚೂರಿ ಇರಿತಕ್ಕೊಳಗಾಗಿದ್ದ ಯುವತಿ ಚಿಕಿತ್ಸೆ ಫಲಿಸದೇ ಮೃತ್ಯು |  ಪರಾರಿಯಾಗಿದ್ದ ಆರೋಪಿ ಶವವಾಗಿ ಪತ್ತೆ!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೊಕ್ಕರ್ಣೆಯಲ್ಲಿ ಯುವತಿಯನ್ನು ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಕಾರ್ತಿಕ್ ಪೂಜಾರಿ ಶವ ಬಾವಿಯಲ್ಲಿ ಪತ್ತೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ರಕ್ಷಿತಾ ಎನ್ನುವ 24 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರ ಗಾಯಗೊಂಡಿದ್ದ ಯುವತಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಸಂಜೆ ವೇಳೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಇದೀಗ ಯುವಕ ಕೂಡ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಮದುವೆಗೆ ಒಪ್ಪದೆ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕುಪಿತಗೊಂಡ ಭಗ್ನ ಪ್ರೇಮಿ ಈ ದುಷ್ಕ್ರತ್ಯವೆಸಗಿದ್ದ. ಇಂದು ರಕ್ಷಿತಾ ಜನ್ಮದಿನವಾಗಿತ್ತು. ಆಕೆ ಕಚೇರಿ ಕೆಲಸಕ್ಕೆ ತೆರಳುವ ಮಾರ್ಗಮದ್ಯೆ ಈ ಘಟನೆ ನಡೆದಿತ್ತು.

ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಡೆಸುತ್ತಿದ್ದಾರೆ.

Comments are closed.