ಉಡುಪಿ: ಮದುವೆಗೆ ನಿರಾಕರಿಸಿದ ಕಾರಣಕ್ಕೆ ತಾನು ಪ್ರೀತಿಸಿದ ಪಕ್ಕದ ಮನೆಯ ಯುವತಿಯನ್ನು ಚೂರಿಯಿಂದ ಇರಿದು ಯುವಕನೊಬ್ಬ ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು ಬೆಳಿಗ್ಗೆ ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯಲ್ಲಿ ಸೆ.12 ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮನೆ ಸಮೀಪದ ಯುವಕ ಈ ದುಷ್ಕೃತ್ಯ ಎಸಗಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಾಯಗೊಂಡ ಯುವತಿಯನ್ನು ರಕ್ಷಿತಾ (24)ಎಂದು ಗುರುತಿಸಲಾಗಿದೆ. ಯುವತಿ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಿಂದ ಆಕೆ 2 ವಾರದಿಂದ ಆರೋಪಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಳು.
ಇಂದು ರಕ್ಷಿತಾ ಹುಟ್ಟುಹಬ್ಬವಾಗಿದ್ದು ಕೆಲಸಕ್ಕಾಗಿ ಯುವತಿ ಬಸ್ ನಿಲ್ದಾಣಕ್ಕೆ ತೆರಳುವ ವೇಳೆ ದುಷ್ಕರ್ಮಿಯಿಂದ ಕೃತ್ಯ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವ ರಕ್ಷಿತಾಗೆ ಮಣಿಪಾಲ ಕೆಎಂಸಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

Comments are closed.