ಉಡುಪಿ: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯ ಮೊಹಲ್ಲಾದಲ್ಲಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ನಾಲ್ಕು ಎತ್ತುಗಳನ್ನು ಕಟ್ಟಿಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಉಸ್ಮಾನಿಯಾ ಮೊಹಲ್ಲಾದ ಮಹಮ್ಮದ್ ಸಾಜೀದ್ ಬಂಧಿತ ಆರೋಪಿ. ಈತ ಯಾವುದೇ ಪರವಾನಿಗೆ ಇಲ್ಲದೇ ಮಾಂಸ ಮಾಡಿ ಮಾರಾಟ ಮಾಡಲು 4 ಎತ್ತುಗಳನ್ನು ಅಕ್ರಮವಾಗಿ ತಂದು ಕಟ್ಟಿ ಹಾಕಿದ್ದ. ಪೊಲೀಸರು ದಾಳಿ ನಡೆಸಿ ಅವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.