ಉಡುಪಿ: ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ಪ್ರಕರಣದಲ್ಲಿ ಬಂಧಿತನಾದ ಬುಕ್ಕಿ ನೀಡಿದ ಮಾಹಿತಿಯ ಹಿನ್ನೆಲೆ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕಾಶ್‌ಮೂಲ್ಯ(43) ಪಂಚನಬೆಟ್ಟು, ಹಿರಿಯಡ್ಕ ರತ್ನಾಕರ ಅಮೀನ್ (48) ಕೊಡವೂರು. ಮಣಿಪಾಲ ಠಾಣೆಯಲ್ಲಿ ನಾಗೇಶ್ (56) ಬಡಗುಬೆಟ್ಟು, ಕೋಟ ಠಾಣೆಯಲ್ಲಿ ವಿಜಯ ನಾಯರಿ(50) ಕಾರ್ಕಡ ಎನ್ನುವಾತನ ಮೇಲೆ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ದಿವಾಕರ ಪೂಜಾರಿ(42) ಶ್ಯಾನರ ಬೆಟ್ಟು,ಚೇರ್ಕಾಡಿ ರಾಮ್‌ರಾಜ್ (44) ಶಿರಿಬೀಡು ಮಠದ ಬೆಟ್ಟು, ಮೂಡನಿಡಂಬೂರು ಜಗದೀಶ್ (39) ಮೂಡಸಗ್ರಿ,ಕುಂಜಿಬೆಟ್ಟು ಚಿದಾನಂದ (35) ಕೊಪ್ಪಳ ಮೂಲ, ಪ್ರಸ್ತುತ అంబాగిలు ತಿಪ್ಪೆಸ್ವಾಮಿ (52)ಮಧ್ವನಗರ ಕೊಡವೂರು ರಾಘವೇಂದ್ರ (41) ಸಂತೆಕಟ್ಟೆ, ಉಡುಪಿ ಉದಯ ಎಸ್ ಭಂಡಾರಿ (45) ಪುತ್ತೂರು ಬಸ್ ನಿಲ್ದಾಣದ ಹಿಂಭಾಗ, ಉಡುಪಿ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಮನೋಜ್ ಕುಮಾರ್(39) ಉಚ್ಚಿಲ, ಬಡಾ ಗ್ರಾಮ ಎನ್ನುವರ ಮೇಲೆ ಪ್ರಕರಣ ದಾಖಲಾಗಿದೆ.
ಮಟ್ಕಾ ದಂಧೆ ಪ್ರಕರಣದಲ್ಲಿ ಶಿರ್ವ ಪೊಲೀಸರು ಮಟ್ಕಾ ಚೀಟಿ ಬರೆದು ಹಣ ಸಂಗ್ರಹಿಸುತ್ತಿದ್ದ ವಿಠ್ಠಲ ದೇವಾಡಿಗ ಮತ್ತು ಉಡುಪಿಯ ಬುಕ್ಕಿ ಲಿಯೋ ಕರ್ನೇಲಿಯೋ ಎನ್ನುವರನ್ನು ಬಂಧಿಸಿದ್ದಾರೆ.
Comments are closed.