ಪ್ರಮುಖ ವರದಿಗಳು

ಮಹಾ ಕುಂಭದಲ್ಲಿ ಪ್ರಧಾನಿ ಮೋದಿ ಪುಣ್ಯಸ್ನಾನ; ರುದ್ರಾಕ್ಷಿ ಕೈಯಲ್ಲಿ ಹಿಡಿದು ಗಂಗಾ ಮಾತೆಗೆ ನಮನ

Pinterest LinkedIn Tumblr

ಪ್ರಯಾಗ್‌ರಾಜ್‌: 144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಪುಣ್ಯ ಸ್ನಾನ ಮಾಡಿದ್ದಾರೆ.

ಬೆಳಗ್ಗೆ 11:30 ಗಂಟೆ ಸುಮಾರಿಗೆ ಬೋಟ್‌ ಮೂಲಕ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮ್‌ಘಾಟ್‌ಗೆ ತೆರಳಿದ ಮೋದಿ ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೇಸರಿ ಹಾಗೂ ಕಡುನೀಲಿ ವಸ್ತ್ರ ಧರಿಸಿ ಪುಣ್ಯಸ್ನಾನ ಮಾಡಿದ್ದಾರೆ. ಇದೇ ವೇಳೆ ರುದ್ರಾಕ್ಷಿ ಮಾಲೆಯನ್ನು ಹಿಡಿದು ಸೂರ್ಯದೇವ ಹಾಗೂ ಗಂಗಾ ಮಾತೆಗೆ ನಮಿಸಿದ್ದಾರೆ. ಇದಾದ ಬಳಿಕ ತಟದಲ್ಲಿ ನಿಂತು ಗಂಗಾ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಒಳಿತಾಗಿ ಪ್ರಾರ್ಥಿಸಿದ್ದಾರೆ.

ಕೈಯಲ್ಲಿ ರುದ್ರಾಕ್ಷಿಯನ್ನು ಹಿಡಿದು ಜಪ ಮಾಡಿ, ಮಂತ್ರ ಪಠಣೆ ಮಾಡುತ್ತ, ಗಂಗಾ ಮಾತೆಗೆ ನಮಿಸಿದ್ದಾರೆ. ಈ ವೇಳೆ ಪೂಜಾರಿಯು ವಿಶೇಷ ಶಕ್ತಿಯುಳ್ಳ ದಾರವನ್ನು ಪ್ರಧಾನಿ ಕೈಗೆ ಕಟ್ಟಿದರು. ಬಳಿಕ ಬಾಕ್ಸ್​ನಲ್ಲಿ ತಂದಿದ್ದ ಸಿಹಿಯನ್ನು ಎಲ್ಲರಿಗೂ ಸ್ವತಹ ಮೋದಿಯವರೇ ಹಂಚಿದರು.

ಸೋಶಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘
ಇಂದು ಪ್ರಯಾಗರಾಜ್ ಮಹಾಕುಂಭದಲ್ಲಿ ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಪೂಜೆ ಸಲ್ಲಿಸುವ ಪರಮ ಭಾಗ್ಯ ಸಿಕ್ಕಿತು. ಗಂಗಾ ಮಾತೆಯ ಆಶೀರ್ವಾದವನ್ನು ಪಡೆಯುವ ಮೂಲಕ, ಮನಸ್ಸು ಅಪರಿಮಿತ ಶಾಂತಿ ಮತ್ತು ತೃಪ್ತಿಯನ್ನು ಕಂಡುಕೊಂಡಿದೆ. ಎಲ್ಲಾ ದೇಶವಾಸಿಗಳ ಸಂತೋಷ, ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಹಾರೈಸಿದೆ” ಎಂದು ಬರೆದುಕೊಂಡಿದ್ದಾರೆ.

Comments are closed.