ಕರಾವಳಿ

ಶಂಕರನಾರಾಯಣ: ಮೆಣಸಿನ‌ ವ್ಯಾಪಾರಿಯ ವಾಹನದಲ್ಲಿದ್ದ 4.5 ಲಕ್ಷ ಹಣ ಕಳವು- ಪ್ರಕರಣ ದಾಖಲು

Pinterest LinkedIn Tumblr

ಕುಂದಾಪುರ: ಬ್ರಹ್ಮಾವರ ಸಂತೆಯಲ್ಲಿ ಮೆಣಸಿನ ವ್ಯಾಪಾರ ಮಾಡಿ ಊರಿಗೆ ವಾಪಾಸ್ಸಾಗುವಾಗ ಊಟಕ್ಕೆ ನಿಲ್ಲಿಸಿದ್ದ ವಾಹನದಲ್ಲಿದ್ದ 4.5 ಲಕ್ಷ ಹಣವನ್ನು ಬೈಕಿನಲ್ಲಿ ಬಂದ ಅಪರಿಚಿತರು ಕದ್ದು ಪರಾರಿಯಾದ ಘಟನೆ ಸಿದ್ದಾಪುರ ಪೇಟೆಯಲ್ಲಿ ನಡೆದಿದ್ದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾವೇರಿ ಮೂಲದ ಮಹಮ್ಮದ್ ರಫಿ(43) ಎನ್ನುವರು ಬ್ರಹ್ಮಾವರದ ಸಂತೆಯಲ್ಲಿ ಮೆಣಸಿನ ವ್ಯಾಪಾರವನ್ನು ಮಾಡಿ ತನ್ನ ಕೆಲಸದವರೊಂದಿಗೆ ವಾಹನದಲ್ಲಿ ವಾಪಾಸ್ಸು ಊರಿಗೆ ಹೊಗುತ್ತಿರುವಾಗ ಊಟ ಮಾಡುವ ಸಲುವಾಗಿ ಸಿದ್ದಾಪುರ ಪೇಟೆಯಲ್ಲಿನ ಹೋಟೆಲ್‌ವೊಂದರ ಬಳಿ ವಾಹನವನ್ನು ನಿಲ್ಲಿಸಿ ಊಟಕ್ಕೆ ಹೋಗಿದ್ದರು.

ರಾತ್ರಿ 9:45ರ ಹೊತ್ತಿಗೆ ಯಾರೋ ಇಬ್ಬರು ವ್ಯಕ್ತಿಗಳು ಒಣ ಮೆಣಸಿನ ವ್ಯಾಪಾರ ಮಾಡಿ ವಾಹನದ ಹಿಂದುಗಡೆ ಇರಿಸಿದ್ದ 4,50,000 ರೂಪಾಯಿ ಹಣವನ್ನು ಬೈಕಿನಲ್ಲಿ ಬಂದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.