ಕರಾವಳಿ

ಪೊಲೀಸ್ ಠಾಣೆಗೆ ಹಾಜರಾದ ಶಾಸಕ ಹರೀಶ್‌ ಪೂಂಜಗೆ ಜಾಮೀನು..!

Pinterest LinkedIn Tumblr

ಬೆಳ್ತಂಗಡಿ: ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದಕ್ಕೆ ಶಾಸಕ ಹರೀಶ್‌ ಪೂಂಜ ಬುಧಬಾರ ರಾತ್ರಿ 9.30ಕ್ಕೆ ಠಾಣೆಗೆ ಹಾಜರಾದರು.

ಬಳಿಕ ಬೆಳ್ತಂಗಡಿ ಠಾಣಾ 58/2024, ಕಲಂ: 143, 147, 341, 504, 506 ಜತೆಗೆ 149 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್‌ ಪೂಂಜರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್‌ ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಚಾರಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಸುನಿಲ್‌ ಕುಮಾರ್‌, ಶಾಸಕರ ಬಂಧನ ಯತ್ನ ಅತ್ಯಂತ ಖಂಡನೀಯ. ಪಾಕಿಸ್ಥಾನಕ್ಕೆ ಜಿಂದಾಬಾದ್‌ ಹಾಕಿದವನಿಗೆ ನೋಟಿಸ್‌ ನೀಡಲು 4 ದಿನ ತೆಗೆದುಕೊಂಡವರು ಓರ್ವ ಜನಪ್ರತಿನಿಧಿಯ ಬಂಧನ ಹುನ್ನಾರ ಕಂಡಾಗ ರಾಜ್ಯ ಯಾವ ಪ್ರಜಾಪ್ರಭುತ್ವದಲ್ಲಿದೆ ಎಂಬ ಪ್ರಶ್ನೆ ಮೂಡುತ್ತದೆ. ನಾವೆಲ್ಲ ಶಾಸಕರು ಈ ಪ್ರಕರಣ ತಾರ್ಕಿಕ ಹಂತ ಕಾಣುವವರೆಗೆ ಬಿಡುವುದಿಲ್ಲ. ನಾಳೆ ನಾಡಿದ್ದರಲ್ಲಿ ಗೃಹಸಚಿವರನ್ನು ಭೇಟಿಯಾಗಿ ಉತ್ತರ ಕೇಳುತ್ತೇವೆ. ರಾಜಕೀಯ ಹುನ್ನಾರವಾದರೆ ವಿಧಾನಸಭೆ ನಡೆಸಲು ಬಿಡುವುದಿಲ್ಲ. ಶಾಸಕರು ಸೌಜನ್ಯದಿಂದ ವರ್ತಿಸಿದರೂ ಪೊಲೀಸರು ಗೂಂಡಾ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದರು.

Comments are closed.