ಕರಾವಳಿ

ಯುವಕ ನಾಪತ್ತೆಯಾದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು; ಮುಂದುವರಿದ ತನಿಖೆ, ಯುವಕನ ಮೊಬೈಲ್ ಪತ್ತೆ…!

Pinterest LinkedIn Tumblr

ಉಡುಪಿ: ಇಲ್ಲಿನ ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಗೊಬ್ಬರಬೆಟ್ಟು ನಿವಾಸಿ ಅಕ್ಷಯ್ (32) ಇವರು ಮೇ. 21 ರಿಂದ ಕಾಣೆಯಾದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬುಧವಾರ ಅವರ ಮೊಬೈಲ್ ಫೋನ್ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಘಟನೆ ಹಿನ್ನೆಲೆ: ಅಕ್ಷಯ ಅವರು ಕೋಟದ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮೇ. 21ರಂದು ರಜೆ ಮಾಡಿ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೋದವರು ಮಧ್ಯಾಹ್ನ 1 ಗಂಟೆಗೆ ಅವರ ಪತ್ನಿಗೆ ಕೋಟದಲ್ಲಿ ಕಾಣಸಿಕ್ಕಿದ್ದು ಸ್ವಲ್ಪ ಕೆಲಸ ಇದೆ ಆಮೇಲೆ ಬರುತ್ತೇನೆ ಎಂದು ಹೇಳಿ ಹೋಗಿದ್ದರು. ಬಳಿಕ ಮನೆಗೆ ಬಾರದೇ ಇರುವುದರಿಂದ ಎಲ್ಲಾ ಭಾಗಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಅವರ ಪತ್ನಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಮೊಬೈಲ್ ಪತ್ತೆ: ಪೊಲೀಸರು ಅಕ್ಷಯ್ ಅವರ ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿದಾಗ ಕುಂದಾಪುರ ತಾಲೂಕಿನ ಕುಂಭಾಶಿ ಸಮೀಪದ ಕೊರವಡಿ ಬಳಿ ಮೊಬೈಲ್ ಇರುವುದು ತಿಳಿದಿದ್ದು ಪೊಲೀಸರು ಹುಡುಕಾಡಿದಾಗ ಕೊರವಡಿ ಬಳಿ ಮುಳ್ಳಿನ ಪೊದೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಕೋಟ ಪೊಲೀಸರು ನಾಪತ್ತೆಯಾದ ಅಕ್ಷಯ್ ಹುಡುಕಾಟ ನಡೆಸುತ್ತಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.

Comments are closed.