ಕರಾವಳಿ

ಕುಂದಾಪುರ ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ಕುಂದಾಪುರ: ನಗರದ ಮುಖ್ಯ ರಸ್ತೆಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ರವಿವಾರ ಬೆಳಿಗ್ಗೆ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ನಾಗೇಶ್‌ ವಹಿಸಿದ್ದರು.

ಆಮಂತ್ರಣ ಪತ್ರಿಕೆಯನ್ನು ಕುಂದಾಪುರ ರೆಡ್‌ ಕ್ರಾಸ್‌ ಸೊಸೈಟಿಯ ಸಭಾಪತಿ ಎಸ್‌. ಜಯಕರ ಶೆಟ್ಟಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್. ನಾಯ್ಕ್ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ನಾಗರಾಜ್ ಖಾರ್ವಿ, ಮೈಲಾರೇಶ್ವರ ಯುವಕ ಮಂಡಲದ ಅಣ್ಣಪ್ಪಯ್ಯ ಡಿ.ಕೆ, ಹೂವಿನ ವ್ಯಾಪಾರಿ ಸಂಘಗಳ ಅಧ್ಯಕ್ಷ ಸತೀಶ್ ಕುಮಾರ್, ಕುಂದಾಪುರ ನಂದಿ ಫ್ರೆಂಡ್ಸ್ ಅಧ್ಯಕ್ಷ ಶಿವಪ್ರಸಾದ್, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಬಿ.ಎಂ ಚಂದ್ರಶೇಖರ ಮೊದಲಾದವರಿದ್ದರು.

ಜೀರ್ಣೋಧ್ಧಾರ ಸಮಿತಿಯ ಅಧ್ಯಕ್ಷ ಯು.ರಾಧಾಕೃಷ್ಣ ಸ್ವಾಗತಿಸಿ, ಗೋಪಾಲ ಪೂಜಾರಿ ನಿರೂಪಿಸಿದರು.

Comments are closed.