ಕರಾವಳಿ

ಕುಂದಾಪುರ: ಅಪಾರ್ಟ್‌ಮೆಂಟ್ 5ನೇ ಮಹಡಿಯಿಂದ ಆಯತಪ್ಪಿ ಬಿದ್ದು ಮಹಿಳೆ ದಾರುಣ ಮೃತ್ಯು

Pinterest LinkedIn Tumblr

ಕುಂದಾಪುರ: ನಗರದ ಮುಖ್ಯ ರಸ್ತೆಯ ಹಳೇ ಗೀತಾಂಜಲಿ ಟಾಕೀಸಿನ ಸಮೀಪದ ಫ್ಲ್ಯಾಟೊಂದರ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಹಿಳೆಯನ್ನು ಫ್ಲ್ಯಾಟಿನ ನಿವಾಸಿ ಲಕ್ಷ್ಮೀ ಪ್ರತಾಪ್‌ ನಾಯಕ್ (41) ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ 7.00 ಗಂಟೆಯ ಸುಮಾರಿಗೆ ಫ್ಲ್ಯಾಟಿನ ಮಹಡಿಯ ಮೇಲೆ ಒಣಗಿಸಲು ಹಾಕಿದ್ದ ತೆಂಗಿನ ಕಾಯಿಯನ್ನು ತರಲು ಹೋಗಿದ್ದು ಅಕಸ್ಮಾತ್ತಾಗಿ ಮಹಡಿಗೆ ಅಳವಡಿಸಲಾಗಿದ್ದ ಫೈಬ‌ರ್ ಶೀಟ್ ಮೇಲೆ ಕಾಲಿಟ್ಟಿದ್ದರಿಂದ ಅದು ತುಂಡಾಗಿ ಎರಡನೇ ಮಹಡಿಯ ಫ್ಲೋರಿಗೆ ಬಿದ್ದು ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ನಗರದ ಆಡಿಟ‌ರ್ ಪ್ರತಾಪ್ ನಾಯಕ್ ರವರ ಪತ್ನಿಯಾಗಿದ್ದು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕುಂದಾಪುರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಕುಂದಾಪುರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.