ಕರಾವಳಿ

ಕುಂದಾಪುರದ ಹೇರಿಕುದ್ರು ಬ್ರಿಡ್ಜ್ ಬಳಿ ಡಿವೈಡರ್’ಗೆ ಡಿಕ್ಕಿಯಾದ ಬೈಕ್: ಸವಾರ ಮೃತ್ಯು

Pinterest LinkedIn Tumblr

ಕುಂದಾಪುರ: ಬೈಕೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ತಲ್ಲೂರು ಸಮೀಪದ ಹೇರಿಕುದ್ರು ಬಿಡ್ಜ್ ಬಳಿ ಸೋಮವಾರ ಮುಂಜಾನೆ ನಡೆದಿದೆ.

ಮೂಲತಃ ಬೈಂದೂರು ಸಮೀಪದ ನಾಗೂರಿನ ಪ್ರಸ್ತುತ ಕುಂದಾಪುರದ ನಿವಾಸಿ ಮೊಹಮ್ಮದ್ ಫರ್ವೇಜ್ (37) ಮೃತರು.

ಮೃತ ಮೊಹಮದ್ ಫರ್ವೇಜ್ ವಿವಾಹಿತರಾಗಿದ್ದು ಓರ್ವ ಹೆಣ್ಣು ಮಗುವಿದೆ. ಇವರು ಉತ್ತಮ ಕ್ರೀಡಾಪಟುವಾಗಿದ್ದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ.

ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.