ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಮತ್ತೆ ಶಂಕಿತ ನಕ್ಸಲ್​ ಚಟುವಟಿಕೆ ಚುರುಕು!?; ಉಡುಪಿ ಎಸ್ಪಿ ಹೇಳಿದ್ದೇನು..?

Pinterest LinkedIn Tumblr

ಉಡುಪಿ: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲೆನಾಡು ತಪ್ಪಲು‌ಪ್ರದೇಶವಾದ ಬೆಳ್ಕಲ್‌, ಗುಂಡಿನಹೊಳೆ ಹಾಗೂ ಮುದೂರು ಪರಿಸರದಲ್ಲಿ ಶಂಕಿತ ನಕ್ಸಲರು ಕಾಣಿಸಿಕೊಂಡಿರುವ ಕುರಿತು ಕೆಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು ಜನರಲ್ಲಿ ಆತಂಕ‌ ಹೆಚ್ಚಿದೆ.

ಈ ಬಗ್ಗೆ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಸ್ಪಷ್ಟನೆ ನೀಡಿದ್ದಾರೆ. ‘ಕೆಲವು ಸ್ಥಳೀಯ ಮಾಧ್ಯಮಗಳು ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ವರದಿ ಮಾಡಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಮಾಹಿತಿಯು ನಿಜವಾಗಿದ್ದರೆ ತಿಳಿಸುತ್ತೇವೆ. ನಕ್ಸಲ್ ಓಡಾಟದ ಬಗ್ಗೆ ಎ.ಎನ್.ಎಫ್ ಜೊತೆ ಎಲ್ಲಾ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಎಸ್ಪಿ ತಿಳಿಸಿದ್ದಾರೆ.

Comments are closed.