ಕರಾವಳಿ

ಹಟ್ಟಿಕುದ್ರು: ಕೋಳಿ ಅಂಕದಲ್ಲಿ ನಿರತರಾಗಿದ್ದ ನಾಲ್ವರು ಪೊಲೀಸರ ವಶಕ್ಕೆ..!

Pinterest LinkedIn Tumblr

ಕುಂದಾಪುರ: ತಾಲೂಕಿನ ಹಟ್ಟಿಕುದ್ರು ಎಂಬಲ್ಲಿನ ದೈವಸ್ಥಾನವೊಂದರ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿಯಲ್ಲಿ ನಿರತರಾಗಿದ್ದ ನಾಲ್ವರನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಮೇಶ್ ದೇವಾಡಿಗ (42), ಮಂಜುನಾಥ (28), ನಾಗೇಶ ಪೂಜಾರಿ (29), ಚಂದ್ರ (52) ಎನ್ನುವರನ್ನು ವಶಕ್ಕೆ ಪಡೆದಿದ್ದು ಕೋಳಿ ಅಂಕಕ್ಕೆ ಬಳಸಿದ 2 ಜೀವಂತ ಕೋಳಿಗಳು, ಕೋಳಿಬಾಳು-2, ಕೋಳಿಯ ಕಾಲಿಗೆ ಬಾಳುಕಟ್ಟಲು ಉಪಯೋಗಿಸಿದ ಹಗ್ಗ-2 ಹಾಗೂ ಕೋಳಿ ಅಂಕ ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ಹಣ ಸ್ವಾಧೀನಪಡಿಸಿಕೊಳ್ಳಲಾಗಿದೆ.

(ಸಾಂದರ್ಭಿಕ ಚಿತ್ರಗಳು)

ಪ್ರಕರಣದ ವಿವರ:
ಗ್ರಾಮಾಂತರ ಠಾಣೆ ಪಿಎಸ್ಐ ಭೀಮಾಶಂಕರ ಸಿನ್ನೂರ ಅವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಹಟ್ಟಿಕುದ್ರು ಎಂಬಲ್ಲಿರುವ ದೈವಸ್ಥಾನವೊಂದರ ಬಳಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು ಸ್ಥಳಕ್ಕೆ ತೆರಳಿದಾಗ ಕೋಳಿ ಹುಂಜಗಳ ಕಾಲಿಗೆ ಕೋಳಿ ಬಾಳನ್ನು ಕಟ್ಟಿ ಜೂಜಾಟಕ್ಕೆ ಬಿಡಲಾಗಿತ್ತು. ಒಂದಷ್ಟು ಮಂದಿ ಸುತ್ತುವರಿದು ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ಜುಗಾರಿ ಆಟ ನಡೆಸುತ್ತಿದ್ದು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿದ್ದಾರೆ. ಸಿಬ್ಬಂದಿಗಳ ಸಹಾಯದಿಂದ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾದವರನ್ನು ಸುತ್ತುವರಿದು 4 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಾಣಿ ಹಿಂಸೆ ತಡೆ ಕಾಯ್ದೆ ಸಹಿತ ಕರ್ನಾಟಕ ಪೊಲೀಸ್ ಆಕ್ಟ್ ಅಡಿ ಆರೋಪಿಗಳ ವಿರುದ್ಧ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.