ಕರಾವಳಿ

ಅಯೋಧ್ಯೆ ಶ್ರೀರಾಮನ ಮೂರ್ತಿ ಆಯ್ಕೆ ಜ. 17ಕ್ಕೆ ನಿರ್ಧಾರ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Pinterest LinkedIn Tumblr

ಉಡುಪಿ: ಅಯೋಧ್ಯೆ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಬಾಲರಾಮನ ವಿಗ್ರಹ ಯಾವುದೆಂದು ಜ. 17ರಂದು ಘೋಷಣೆ ಆಗಲಿದೆ. ಎರಡು ಕರಿ, ಒಂದು ಅಮೃತಶಿಲೆ ಮೂರ್ತಿ ನಿರ್ಮಾಣವಾಗಿದೆ. ಪೂರ್ಣವಾಗಿ ಪರಿಶೀಲಿಸಿ ಅಂತಿಮವಾಗಿ ನಿರ್ಧರಿ ಸಲಿದ್ದು, ಮೆರವಣಿಗೆ, ಸರಯೂ ನದಿಯ ಅಭಿಷೇಕದ ದಿನ ಆಯ್ಕೆ ಮಾಡಲಾಗುತ್ತದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಆಹ್ವಾನಿಸುವುದಕ್ಕೆ ಸಂಬಂಧಿಸಿ ಯಾವುದೇ ಗೊಂದಲವಿಲ್ಲ. ದೇಶದಲ್ಲಿ ರಾಮನ ಭಕ್ತರು, ಸಂತರು, ಮಹಂತರು ಬಹಳ ಇದ್ದಾರೆ. ಜನಪ್ರತಿನಿಧಿಗಳು, ದಾನಿಗಳು ಭಕ್ತರೆಲ್ಲ ಆಮಂತ್ರಿತರೇ. ಪ್ರಾಣಪ್ರತಿಷ್ಠೆಗೆ ಪ್ರಾತಿನಿಧ್ಯ ಇಟ್ಟುಕೊಂಡು ಆಹ್ವಾನ ನೀಡಲಾಗಿದೆ. ಸೀಮಿತ ಸ್ಥಳಾವಕಾಶ ಇರುವುದರಿಂದ ಎಲ್ಲರಿಗೂ ಅವಕಾಶ ಕಲ್ಪಿಸುವುದು ಕಷ್ಟವಾದೀತು. ಪ್ರತಿಷ್ಠಾಪನೆಯ ಬಳಿಕ ಕೋಟ್ಯಂತರ ಭಕ್ತರಿಗೆ ಬಾಲರಾಮನ ದರ್ಶನಕ್ಕೆ ಅವಕಾಶವಿದೆ ಎಂದರು.

ಮಂದಿರದ ಸ್ಥಳಾವಕಾಶ ಬಹಳ ಸೀಮಿತವಾಗಿದೆ. ಭಕ್ತರು ತಪ್ಪು ತಿಳಿಯಬಾರದು. ಆಹ್ವಾನ ಇದ್ದವರು ಖಂಡಿತಾ ಭಾಗಿಯಾಗಬೇಕು. ಉಳಿದವರು ಮುಂದಿನ ದಿನದಲ್ಲಿ ಅಯೋಧ್ಯೆಗೆ ಹೋಗಬೇಕು. ಅಲ್ಲಿ ಈಗಾಗಲೇ ಟೆಂಟ್‌, ಶೆಡ್‌ ತಯಾರಾಗಿದೆ ಎಂದರು.

ಹುಬ್ಬಳ್ಳಿ ಕರಸೇವಕರ ಪ್ರಕರಣ ತೆರೆದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಂದಿನ ಕರಸೇವಕರನ್ನು ಬಂಧಿಸಲಾಗಿದೆ. ಇದು ಹಿಂದೂಗಳನ್ನು ಮಟ್ಟ ಹಾಕುವ ಪ್ರಯತ್ನವೇಕೆ? ಈ ಬಗ್ಗೆ ಗೊಂದಲವಾಗದಂತೆ ಸರಕಾರ ಮುಂಜಾಗ್ರತೆ ವಹಿಸಬೇಕು ಎಂದರು.

Comments are closed.