ಕರ್ನಾಟಕ

ಹೊಸ ವರ್ಷದಂದು ನೇತ್ರದಾನ ಮಾಡಿ ಮಾದರಿಯಾದ ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್

Pinterest LinkedIn Tumblr

ಬೆಂಗಳೂರು: ಹೊಸ ವರ್ಷದ ವೇಳೆ ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಪೊಲೀಸರಿಗೆ ಕಮಿಷನರ್ ದಯಾನಂದ್ ಬಿ. ಅವರು ಮಾದರಿ ಆಗಿದ್ದಾರೆ.

ಹೊಸ ವರ್ಷಕ್ಕೆ ಶುಭಾಶಯ ಕೊರುವ ನೆಪದಲ್ಲಿ ಹೂಗುಚ್ಚ, ಸಿಹಿ ತಿನಿಸುಗಳನ್ನು ತರುವ ಬದಲು ಅನಾಥಾಶ್ರಮಗಳಿಗೆ ಧನಸಹಾಯ ನೀಡಿ ಎಂದು ಪೊಲೀಸ್ ಕಮಿಷನರ್ ದಯಾನಂದ್ ಅವರು ಸೂಚಿಸಿದ್ದರು.

2024ರ ಹೊಸ ವರ್ಷದ ಶುಭ ದಿನದಂದು ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಪೊಲೀಸರಿಗೆ ಕಮಿಷನರ್ ದಯಾನಂದ್ ಅವರು ಮಾದರಿ ಆಗಿದ್ದಾರೆ. ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರ ಕಮಿಷನರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದ್ದಾರೆ. ಕಮಿಷನರ್ ಅವರ ಪ್ರೇರಣೆಯಿಂದ ಒಂದಷ್ಟು ಮಂದಿ ಪೊಲೀಸರು ಕೂಡ ನೇತ್ರದಾನ ಮಾಡಿದ್ದಾರೆ.

ಈ ಬಗ್ಗೆ ಪೊಲೀಸ್ ಆಯುಕ್ತ ದಯಾನಂದ್ ಅವರು ತಮ್ಮ ಎಕ್ಸ್(ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://x.com/CPBlr/status/1741762789801369965?s=20

Comments are closed.