ಕರಾವಳಿ

ಬಿಜೆಪಿ ಮುಖಂಡ, ಉಡುಪಿ ಶಾರದಾ ಇಂಟರ್‌ನ್ಯಾಶನಲ್ ಹೋಟೆಲ್ ಮಾಲೀಕ ಬಿ.ಸುಧಾಕರ ಶೆಟ್ಟಿ ನಿಧನ

Pinterest LinkedIn Tumblr

ಉಡುಪಿ: ಬಿಜೆಪಿ ಮುಖಂಡ ಮತ್ತು ಕರಾವಳಿ ಬೈಪಾಸ್ ರೋಡ್ ಸಮೀಪದಲ್ಲಿರುವ ಶಾರದಾ ಇಂಟರ್‌ನ್ಯಾಶನಲ್ ಹೋಟೆಲ್ ಮಾಲೀಕ ಬಿ ಸುಧಾಕರ ಶೆಟ್ಟಿ ಅವರು ಜ.4 ರಂದು ಗುರುವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಸುಧಾಕರ ಶೆಟ್ಟಿ 2013ರಲ್ಲಿ ಬಿಜೆಪಿಯಿಂದ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದರು. ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಪ್ರಗತಿಪರ ಕೃಷಿಕ ಹಾಗೂ ಹೋಟೆಲ್ ಉದ್ಯಮಿಯಾಗಿದ್ದ ಸುಧಾಕರ ಶೆಟ್ಟಿ , ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮತ್ತು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Comments are closed.