ಕರ್ನಾಟಕ

ಹೊಸವರ್ಷದ ಬೆನ್ನಲ್ಲೇ ಮದ್ಯಪಾನಾಸಕ್ತರಿಗೆ ಬಿಗ್ ಶಾಕ್; ಓಟಿ, ಬಿಪಿ, 8ಪಿಎಂ ದರ ಹೆಚ್ಚಳ..!

Pinterest LinkedIn Tumblr

ಬೆಂಗಳೂರು: ಹೊಸ ವರ್ಷಾಚರಣೆಯ ಬೆನ್ನಲ್ಲೆ‌ಮೂರು ಕಂಪೆನಿಗಳ ಮದ್ಯದ ಮೇಲಿನ ದರವನ್ನು ಶೇ. 20ರಷ್ಟು ಹೆಚ್ಚಳ ಮಾಡಿ ಉತ್ಪಾದನ ಕಂಪೆನಿಗಳು ನಿರ್ಣಯ ಕೈಗೊಂಡಿದೆ.

ಇದನ್ನು ಬಾರ್‌ ಮಾಲಕರ ಸಂಘವೂ ಒಪ್ಪಿಕೊಂಡಿದ್ದು, ಈಗಾಗಲೇ ಬಾರ್‌ ಮಾಲೀಕರಿಗೆ ಮದ್ಯ ತಯಾರಿಕಾ ಕಂಪೆನಿಗಳು ದರ ಪರಿಷ್ಕರಣೆಯ ಪ್ರತಿ ನೀಡಿದೆ. ಉತ್ಪಾದನ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬಂದಿರುವುದಾಗಿ ಮದ್ಯ ತಯಾರಿಕಾ ಸಂಸ್ಥೆಗಳು ತಿಳಿಸಿವೆ. ಸುಮಾರು ಶೇ. 20ರಷ್ಟು ದರ ಹೆಚ್ಚಳವಾಗಿದ್ದು, ಪ್ರತೀ ಕ್ವಾರ್ಟರ್‌ಗೆ 20 ರಿಂದ 30 ರೂ. ದರ ಹೆಚ್ಚಳವಾಗಲಿದೆ.

ಮೂರು ಬ್ರಾಂಡ್‌ಗಳ ಮದ್ಯದ ದರ ಏರಿಕೆಯಾಗಿದೆ. ಪ್ರತೀ 180 ಎಂಎಲ್‌ ಓಟಿ ದರವು 90 ರೂ. ಗಳಿಂದ 111 ರೂ.ಗೆ ಏರಿಕೆಯಾಗಿದ್ದು, ಬಿಪಿ 110 ರೂ.ಗಳಿಂದ 145 ರೂ. ಮತ್ತು 8ಪಿಎಂ ವಿಸ್ಕಿಯ ದರವು 90ರಿಂದ 110 ರೂ.ಗೆ ಹೆಚ್ಚಳ ಆಗಿದೆ ಎನ್ನಲಾಗಿದೆ.

ಸರ್ಕಾರದಿಂದ ಯಾವುದೇ ದರ ಏರಿಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿರುವ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಅವರು ಮದ್ಯ ತಯಾರಿಕಾ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿರಬಹುದು ಎಂದಿದ್ದಾರೆ.

Comments are closed.