ಕರಾವಳಿ

ಕುಂಭಾಶಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕೆನರಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಮೃತ್ಯು

Pinterest LinkedIn Tumblr

ಕುಂದಾಪುರ: ಕೆನರಾ ಬ್ಯಾಂಕನ ನಿವೃತ್ತ ಮೆನೇಜರ್, ಹಿರಿಯ ಸಮಾಜ ಸೇವಕ, ಕೆ.ಪಾಂಡುರಂಗ ಭಟ್ (81) ಕುಂಭಾಶಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳವಾರ ಜ.2ರಂದು ನಿಧನರಾದರು.

ಉತ್ತಮ ಜನಸೇವಕರಾಗಿದ್ದ ಅವರು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಾನಿಯಾಗಿ ಹಲವು ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದರು. ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀರಾಮ ಸೇವಾ ಸಂಘದ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದರು. ಉತ್ತಮ ಕಲಾವಿದರು.

ಇವರು ಪತ್ನಿ, ಓರ್ವ ಪುತ್ರ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Comments are closed.