ಕರಾವಳಿ

ಆರು ಪ್ರಯಾಣಿಕರನ್ನು ಬಿಟ್ಟು ಮಂಗಳೂರಿಗೆ ಹಾರಿದ್ದ ಇಂಡಿಗೊ ವಿಮಾನ..!

Pinterest LinkedIn Tumblr

ಬೆಂಗಳೂರು: ವಿಮಾನ ಹೊರಡುವ ಸಮಯಕ್ಕಿಂತ 10 ನಿಮಿಷ ಮೊದಲೇ ಟೇಕಾಫ್ ಆಗಿ, ಆರು ಮಂದಿ ಪ್ರಯಾಣಿಕರನ್ನು ಬೆಂಗಳೂರು ನಿಲ್ದಾಣದಲ್ಲೇ ಬಿಟ್ಟು ಇಂಡಿಗೋ ವಿಮಾನ ಹಾರಿದೆ.

(ಸಾಂದರ್ಭಿಕ ಚಿತ್ರ)

ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಶುಕ್ರವಾರ ತೆರಳಬೇಕಿದ್ದ 6E6162 ವಿಮಾನವು ನಿಗದಿತ ಸಮಯ ಮಧ್ಯಾಹ್ನ 2.55 ರ ಬದಲು 10 ನಿಮಿಷ ಮುಂಚಿತವಾಗಿ ಅಂದರೆ 2.45ಕ್ಕೆ ಟೇಕಾಫ್ ಆಗಿತ್ತು. ತಮ್ಮ ಬಳಿ ಬೋರ್ಡಿಂಗ್ ಪಾಸ್ ಇದ್ದರೂ ವಿಮಾನ ತಪ್ಪಿಹೋಗಿದೆ ಎಂದು ಆರು ಪ್ರಯಾಣಿಕರ ಪೈಕಿ ಇಬ್ಬರು ದೂರು ನೀಡಿದ್ದರು.

ಬಳಿಕ ಆರು ಮಂದಿ ಪ್ರಯಾಣಿಕರಿಗೆ ರಾತ್ರಿ 8.20ಕ್ಕೆ ಮಂಗಳೂರಿಗೆ ಹೊರಡುವ ಮುಂದಿನ ವಿಮಾನ (6E578) ದಲ್ಲಿ ಪ್ರಯಾಣಿಸಲು ಉಚಿತ ಟಿಕೆಟ್ ನೀಡಲಾಯಿತು. ವಿಳಂಬದಿಂದಾಗಿ ಆರು ಮಂದಿ ಪ್ರಯಾಣಿಕರ ಪೈಕಿ ಇಬ್ಬರು ದೆಹಲಿಗೆ ತೆರಳಬೇಕಿದ್ದ ವಿಮಾನ ತಪ್ಪಿದೆ.

ಇಂಡಿಗೊ ಗ್ರಾಹಕರ ವಿಭಾಗದ ಸಿಬ್ಬಂದಿ ಈ ಆರೋಪವನ್ನು ನಿರಾಕರಿಸಿದ್ದು, ನಿಗದಿತ ಅವಧಿಗೇ ವಿಮಾನ ಟೇಕಾಫ್ ಆಗಿದೆ. ಅವಧಿಗೂ ಮುನ್ನ ವಿಮಾನ ನಿಲ್ದಾಣದಿಂದ ನಿರ್ಗಮಿಸಿದೆ ಆರೋಪವನ್ನು ನಿರಾಕರಿಸಿದೆ. ಪ್ರಯಾಣಿಕರ ಅನಾನುಕೂಲತೆಗಾಗಿ ಕ್ಷಮೆ ಯಾಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.

Comments are closed.