ಕರಾವಳಿ

ಕೋಟ ಪೊಲೀಸರ ಕಾರ್ಯಾಚರಣೆ: ಇಸ್ಪೀಟ್ ಆಡುತ್ತಿದ್ದ 24 ಮಂದಿ ಸಹಿತ ಲಕ್ಷಾಂತರ ನಗದು, ಸೊತ್ತುಗಳು ವಶಕ್ಕೆ

Pinterest LinkedIn Tumblr

ಕುಂದಾಪುರ: ಇಸ್ಪೀಟ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು 24 ಮಂದಿ ಜುಗಾರಿ ನಿರತರನ್ನು ಹಾಗೂ
1 ಲಕ್ಷದ 49 ಸಾವಿರ ರೂ. ವಶಕ್ಕೆ ಪಡೆದ ಘಟನೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್‌ ಬಳಿಯ ವಿನಾಯಕ ಸಭಾಂಗಣದಲ್ಲಿ ನಡೆದಿದೆ.

ಅಬ್ದುಲ್‌ ಮುನೀರ್‌, ಸಲ್ಮಾನ್‌, ಬಸವರಾಜ, ವಿಷ್ಣು ಕೆ.ವಿ., ದಿನೇಶ್‌, ಕೆ. ವಿನಾಯಕ, ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ, ಅ್ಯಂಟನಿ ಮಸ್ಕರೇನಸ್‌, ಶೃತಿರಾಜ್‌, ರಘು, ಹುಸೇನ್‌, ಸಂದೇಶ್‌, ರಾಜು ಮೋಗೇರ, ಗೋಪಾಲ, ಗಣೇಶ್‌, ಮಿಥುನ್‌, ಸುಧರ್ಮ, ಕಮಲಾಕ್ಷ ಹಾಗೂ ಸುಧಾಕರ ಎನ್ನುವರನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ ಪರಿಕರಗಳು, 1 ಲಕ್ಷದ 49 ಸಾವಿರದ 680 ರೂ. ನಗದು, ಇಟಿಯೋಸ್ ಕಾರು, ಓಮ್ನಿ ಕಾರು, ರಿಟ್ಜ್ ಕಾರು, ನಾಲ್ಕು ದ್ವಿಚಕ್ರ ವಾಹನಗಳು (ಒಟ್ಟು 8,27,580 ಮೌಲ್ಯ) ವಶಕ್ಕೆ ಪಡೆಯಲಾಗಿದೆ.

ಕೋಟ ಪಿಎಸ್ಐ ಶಂಬುಲಿಂಗಯ್ಯ ಎಂ.ಇ ಅವರಿಗೆ ಬಂದ ಖಚಿತ ವರ್ತಮಾನದಂತೆ ಉಡುಪಿ ಡಿವೈಎಸ್ಪಿ ಅವರಿಂದ ಸರ್ಚ್‌ ವಾರೆಂಟ್‌ ಪಡೆದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಜುಗಾರಿ ಆಟ ಖಚಿತಪಡಿಸಿಕೊಂಡು ದಾಳಿ ನಡೆಸಲಾಗಿತ್ತು.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.