ಕರಾವಳಿ

ಡಿಕ್ಕಿ ಹೊಡೆದ ಸ್ಯಾಂಟ್ರೋ ಕಾರನ್ನು 1 ಕಿ.ಮೀ ದೂರ ಎಳೆದೊಯ್ದ ಟಿಪ್ಪರ್ ಚಾಲಕ

Pinterest LinkedIn Tumblr

ಉಡುಪಿ: ಕನ್ನಂಗಾರ್ ಬೈಪಾಸ್ ಬಳಿ ಟಿಪ್ಪರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದ ಸ್ಯಾಂಟ್ರೋ ಕಾರನ್ನು ಟಿಪ್ಪರ್ ಚಾಲಕ ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋದ ಘಟನೆ ವರದಿಯಾಗಿದೆ.

ಬೇರೆ ಕಾರಿನವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ. ಸುಮಾರು ಒಂದು ಕಿ.ಮೀ ದೂರ ಎಳೆದುಕೊ‌ಂಡು ಹೋಗಿದ್ದಾನೆ. ಪಡುಬಿದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.

Comments are closed.