ಕುಂದಾಪುರ: ತ್ರಾಸಿ-ಮರವಂತೆ ಕಡಲಿನಲ್ಲಿ ಯುವಕನೋರ್ವ ಕಡಲಬ್ಬರಕ್ಕೆ ಸಿಲುಕಿ ಕೊಚ್ಚಿ ಹೋದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.

ಮೂಲತಃ ಗದಗದ ಪ್ರಸ್ತುತ ಕಾಪುವಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಫಿರ್ ಸಾಬ್ ನಾದಾಫ್ (22) ನೀರಿನಲ್ಲಿ ಕೊಚ್ಚಿಹೋದಾತ.
ಕಾಪುವಿನಿಂದ ಹೊರಟ ಆಕ್ಸಿಜನ್ ಟ್ಯಾಂಕರಿನಲ್ಲಿ ನದಾಫ್ ಹಾಗೂ ಇತರ ಇಬ್ಬರು ಆಗಮಿಸಿದ್ದು ತ್ರಾಸಿ ಬಳಿ ಸಮುದ್ರ ತೀರಕ್ಕೆ ಬಂದಿದ್ದಾರೆ. ಈ ವೇಳೆ ನದಾಫ್ ಫೋನ್ ಕರೆಯಲ್ಲಿದ್ದು ದೈತ್ಯ ಅಲೆಗಳ ಅಬ್ಬರಕ್ಕೆ ಸಿಕ್ಕು ಸಮುದ್ರ ಪಾಲಾಗಿದ್ದಾರೆ.
ಫಿರ್ ಸಾಬ್ ನಾದಾಪ್ ಅವರಿಗೆ ಮಧ್ಯಾಹ್ನದಿಂದಲೂ ಶೋಧ ಕಾರ್ಯ ಮುಂದುವರೆದಿದೆ. ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳ, ಗಂಗೊಳ್ಳಿ24*7 ಆಪತ್ಬಾಂಧವ ಅಂಬುಲೆನ್ಸ್ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿದ್ದರು.
Comments are closed.