ಕರಾವಳಿ

ಉಡುಪಿಗೆ ಬಂದ ರಾಹುಲ್ ಗಾಂಧಿಗೆ ಅಂಜಲ್ ಮೀನು ಗಿಪ್ಟ್ ನೀಡಿದ ಮೀನುಗಾರ ಮಹಿಳೆ..!

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ ರಂಗೇರಿದ್ದು, ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಇಂದು (ಏಪ್ರಿಲ್‌ 27) ರಂದು ಉಡುಪಿಗೆ ಭೇಟಿ ನೀಡಿದರು.

ಜಿಲ್ಲೆಗೆ ಆಗಮಿಸಿದ ರಾಹುಲ್ ಗಾಂಧಿಯನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು. ಮೀನುಗಾರಿಕೆ ಬಗ್ಗೆ ಮೀನುಗಾರ ಮಹಿಳೆಯರು, ಕಾರ್ಮಿಕರ ಜೊತೆಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ್ದಾರೆ. ದೇವಸ್ಥಾನ ಆವರಣದ ಸಭಾಂಗಣದಲ್ಲಿ ಎರಡು ಸಾವಿರದಷ್ಟು ಮೀನುಗಾರ ಪ್ರತಿನಿಧಿಗಳ ಜೊತೆ ರಾಹುಲ್ ಸಂವಾದ ನಡೆಸಿದರು. ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದುಲ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕನ್ನಡ- ಇಂಗ್ಲಿಷ್‌ನಲ್ಲಿ ವ್ಯವಹರಿಸಿ ಮೀನುಗಾರರ ಸಮಸ್ಯೆಯನ್ನು ರಾಹುಲ್ ಗಾಂಧಿಗೆ ವಿವರಿಸಿದರು.

ಮೀನುಗಾರರ ಸಂವಾದದ ಬಳಿಕ ವೇದಿಕೆಯಲ್ಲಿ ಮೀನುಗಾರ ಮಹಿಳೆಯೊಬ್ಬರು ರಾಹುಲ್‌ ಗಾಂಧಿಗೆ ಅಂಜಲ್‌ ಮೀನು ಗಿಫ್ಟ್‌ ನೀಡಿದ್ದಾರೆ. ಮಹಿಳೆ ನೀಡಿದ ಉಡುಗೊರೆಯನ್ನು ರಾಹುಲ್‌ ಗಾಂಧಿ ಖುಷಿಯಿಂದ ಸ್ವೀಕರಿಸಿದರು‌.

Comments are closed.