ಕುಂದಾಪುರ: ತಾಲೂಕಿನ ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳ ಅಜ್ಜ ಅಜ್ಜಿಯಂದಿರ ದಿನಾಚರಣೆ ಶುಕ್ರವಾರದಂದು ಜರಗಿತು.

ಪತ್ರಕರ್ತ, ಲೇಖಕ ಮುನಿಯಾಲು ಗಣೇಶ ಶೆಣೈ ಮಾತನಾಡಿ, ಹಿರಿಯ ಪೋಷಕರ ದಿನವನ್ನು ಈ ಹಂತದಲ್ಲಿ ಆಚರಿಸುವುದು ಮತ್ತು ಮೂರು ತಲೆಮಾರುಗಳನ್ನು ಜೊತೆ ಸೇರಿಸಿರುವುದು ಹೆಮ್ಮೆಯ ಸಂಗತಿ. ಇಂತಹ ಕಾರ್ಯಕ್ರಮ ಇನ್ನೆಷ್ಟು ನಡೆಯಬೇಕು ಹಿಂದಿನ ಕಾಲದಲ್ಲಿ ದೊಡ್ಡ ಕುಟುಂಬ ಎಲ್ಲರೂ ಸೇರಿ ಜೀವನ ನಡೆಸುತ್ತಿದ್ದರು. ಇಂದು ಅಜ್ಜ-ಅಜ್ಜಿ ಮಕ್ಕಳು ಮೊಮ್ಮಕ್ಕಳಿಂದ ದೂರ ಇದ್ದಾರೆ. ಹೆತ್ತವರಾದವರು ವಾರದಲ್ಲಿ ಒಂದು ಬಾರಿಯಾದರೂ ತಮ್ಮ ಮಕ್ಕಳಿಗೆ ಅಜ್ಜ ಅಜ್ಜಿಯರ ಜೊತೆ ಸೇರಿ ಊಟ ಮಾಡುವ ಸಮಯ ಕಳೆಯುವ ಸಂದರ್ಭವನ್ನು ಒದಗಿಸಿಕೊಡಬೇಕು. ಅಲ್ಲದೆ ಹೆತ್ತವರು ಮಕ್ಕಳಿಗೆ ಕಷ್ಟ ದ ಅರಿವನ್ನು ತಿಳಿಸಿ ಹೇಳಬೇಕು,ಉತ್ತಮ ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಬೇಕಾದರೆ ಹೆತ್ತವರು ಮತ್ತು ಹಿರಿಯರು ಜೊತೆಗೂಡಿದಾಗ ಮಾತ್ರ ಸಾಧ್ಯ.ಆಗ ಒಂದು ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಟಿ ಕಾರ್ಯನಿರ್ವಾಹಕಿ ಅನುಪಮಾ ಎಸ್. ಶೆಟ್ಟಿ ಮಾತನಾಡಿ ಮಕ್ಕಳ ಬೆಳವಣಿಗೆಗೆ ಹಿರಿಯರ ಪಾತ್ರ ಮಹತ್ವವಾದದ್ದು ನಾವೆಲ್ಲ ನಮ್ಮ ಚಿಕ್ಕವಯಸ್ಸಿನಲ್ಲಿ ಅಜ್ಜಿಯ ಮನೆಯಲ್ಲಿಯೇ ಕಳೆದಿದ್ದೇವೆ. ಅವರು ನಮಗೆ ಮನೆಯಲ್ಲಿನ ನಮ್ಮ ಜವಾಬ್ದಾರಿ ತಿಳಿಸಿ ಹೇಳುತ್ತಿದ್ದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲ ಮೋಹನ್ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಯೋಜಕಿ ವಿಶಾಲ ಶೆಟ್ಟಿ ನಿರೂಪಿಸಿ ಸ್ವಾಗತಿಸಿದರು. ಸಹಶಿಕ್ಷಕಿ ಶುಭಲಕ್ಮೀ ವಂದಿಸಿದರು.
Comments are closed.