ಕುಂದಾಪುರ: ಕೊಲ್ಲೂರು ಮಾರ್ಗ ಮದ್ಯೆ ಸಿಗುವ ಚಿತ್ತೂರು ಸಮೀಪ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿ, ಮಹಿಳೆಯನ್ನು ಮನೆಗೆ ತಲುಪಿಸುವ ಮೂಲಕ ಸಚಿವ ವಿ. ಸುನಿಲ್ ಕುಮಾರ್ ಹಾಗೂ ಅವರ ಪತ್ನಿ ಪ್ರಿಯಾಂಕಾ ಸುನಿಲ್ ಮಾನವೀಯತೆ ಮೆರೆದಿದ್ದಾರೆ.
ಸಚಿವ ಸುನಿಲ್ ಕುಮಾರ್ ಹಾಗೂ ಪತ್ನಿ ಪ್ರಿಯಾಂಕಾ ಅವರು ಕೊಲ್ಲೂರು ದೇವಸ್ಥಾನದಲ್ಲಿ ಅಮವಾಸ್ಯೆ ಪೂಜೆ ಮುಗಿಸಿ ಕಾರ್ಕಳಕ್ಕೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ಸಮೀಪ ಬೈಕಿನಿಂದ ಮಹಿಳೆಯೋರ್ವರು ಬಿದ್ದು ಗಾಯಗೊಂಡಿರುವುದನ್ನು ಕಂಡು ತಕ್ಷಣ ಕಾರು ನಿಲ್ಲಿಸಿದ ಸಚಿವರು, ಮಹಿಳೆ ಆರೋಗ್ಯ ವಿಚಾರಿಸಿದ್ದಾರೆ. ಪ್ರಿಯಾಂಕಾ ಅವರು ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಸುನಿಲ್ ಕುಮಾರ್ ಅನ್ಯ ಕಾರ್ಯಕ್ರಮ ನಿಮಿತ್ತ ಮುಂದೆ ತೆರಳಿದ್ದು ಪತ್ನಿ ಪ್ರಿಯಾಂಕಾ ಅವರು ಬೇರೊಂದು ಕಾರಿನಲ್ಲಿ ಗಾಯಗೊಂಡ ಮಹಿಳೆಯನ್ನು ಗಂಗೊಳ್ಳಿಸಮೀಪದ ಗುಜ್ಜಾಡಿಯಲ್ಲಿರುವ ಅವರ ಮನೆಗೆ ಬಿಟ್ಟು ಹೋಗಿದ್ದಾರೆ. ಪ್ರಿಯಾಂಕಾ ಗಾಯಗೊಂಡ ಮಹಿಳೆ ಉಪಚರಿಸುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ.
Comments are closed.