ಕರಾವಳಿ

ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಸಂಕ್ಷಿಪ್ತ ಜೀವನ ಚರಿತ್ರೆ ‘ದಿವ್ಯ ಚೇತನ’ ಕೃತಿ ಸಮರ್ಪಣೆ

Pinterest LinkedIn Tumblr

ಕುಂದಾಪುರ: ಖ್ಯಾತ ಸಾಹಿತಿ ಡಾ. ಎಂ.ಓ ಮಮತೇಶ್ ಕಡೂರು ಅವರು ಬರೆದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಸಂಕ್ಷಿಪ್ತ ಜೀವನ ಚರಿತ್ರೆ ‘ದಿವ್ಯ ಚೇತನ’ ಕೃತಿ ಸಮರ್ಪಣೆ ಕಾರ್ಯಕ್ರಮ ಬೈಂದೂರು ತಾಲೂಕು ಉಪ್ಪುಂದ ಪರಿಚಯ ಹೋಟೆಲ್ ದೇವಕಿ ಸಭಾಭವನದಲ್ಲಿ ಶನಿವಾರ ನಡೆಯಿತು. ಬಾಬು ಪೂಜಾರಿ ಹಾಗೂ ಮಂಜಮ್ಮ ಪೂಜಾರಿಯವರಿಗೆ ಕೃತಿ ಸಮರ್ಪಿಸಲಾಯಿತು.

ಇದೇ ಸಂದರ್ಭ ಖ್ಯಾತ ಸಾಹಿತಿ ಹಾಗೂ ದಿವ್ಯ ಚೇತನ ಪುಸ್ತಕದ ಲೇಖಕ ಡಾ. ಎಂ.ಓ ಮಮತೇಶ್ ಕಡೂರು ಅವರನ್ನು ‘ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಗೋವಿಂದ ಬಾಬು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿತ್ಯವೂ ನಾರಾಯಣ ಗುರು ಅವರಿಗೆ ಕೈ ಮುಗಿದು ಬರುವವನು ನಾನು. ಅವರ ಆದರ್ಶಗಳನ್ನು ಪಾಲಿಸುತ್ತಾ, ಎಲ್ಲಾ ಸಮುದಾಯದವರನ್ನು ಒಂದೇ ಎಂಬಂತೆ ಚಾರಿಟಿ ನಡೆಸಿಕೊಂಡು ಬಂದಿರುವೆ. ಹೀಗಾಗಿ ನಾರಾಯಣ ಗುರುಗಳ ಬಗ್ಗೆ ಬರೆದ ಮಮತೇಶ ಅವರಿಗೆ ‘ಕನ್ನಡ ರತ್ನ ‘ಎಂಬ ಪ್ರಶಸ್ತಿ ನೀಡಲಾಗಿದೆ ಎಂದರು.

ನಮ್ಮಲ್ಲಿ ಎಷ್ಟೋ ಮಂದಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳಿದ್ದಾರೆ. ಅವರಿಗೆ ಪ್ರೋತ್ಸಾಹ ನೀಡುವವರಿಲ್ಲ. ನಾವು ಅಂತಹ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ, ಅವರು ಉನ್ನತ ಸ್ಥಾನಕ್ಕೇರುತ್ತಾರೆ. ಕ್ರೀಡೆಯಲ್ಲಿ ಗುರುರಾಜ್ ಪೂಜಾರಿ ಭಾರತಕ್ಕೆ ಹೆಮ್ಮೆ. ಅವರು ಪಟ್ಟ ಕಷ್ಟವನ್ನು ಹೇಳಿಕೊಂಡಾಗ ನೋವಾಯಿತು. ಹಾಗೆ ಎಷ್ಟೋ ಮಂದಿ ನಮ್ಮಲ್ಲಿ ಇದ್ದಾರೆ. ಅವರಿಗೆ ಪ್ರೋತ್ಸಾಹಿಸಿದರೆ, ಭವಿಷ್ಯದಲ್ಲಿ ಅವರು ಸಾಧಕರಾಗುತ್ತಾರೆ ಎಂದರು.

ಈ ಸಂದರ್ಭ ಬೈಂದೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಟ್ಟಯ್ಯ ಪೂಜಾರಿ, ಉಪ್ಪುಂದ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನರಸಿಂಹ ಪೂಜಾರಿ, ಬೈಂದೂರು ತಾಲೂಕು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಗಿರೀಶ್ ಬೈಂದೂರು, ಗೋವಿಂದ ಬಾಬು ಪೂಜಾರಿಯವರ ತಂದೆ ಬಾಬು ಪೂಜಾರಿ, ತಾಯಿ ಮಂಜಮ್ಮ ಇದ್ದರು.

ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

 

Comments are closed.