ಕರಾವಳಿ

ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಉಪ್ಪುಂದ: ವಾರ್ಷಿಕ ಸಭೆ; 8% ಡಿವಿಡೆಂಡ್ ಘೋಷಣೆ, ಸಾಧಕ ವಿದ್ಯಾರ್ಥಿನಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಉಪ್ಪುಂದದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕಿನ‌ ಸರ್ವ ಸದಸ್ಯರ ವಾರ್ಷಿಕ ಸಭೆಯು ಉಪ್ಪುಂದ ನಂದನವನದ ಪರಿಚಯ ದೇವಕಿ ಸಭಾಭವನದಲ್ಲಿ ಶನಿವಾರ ನಡೆಯಿತು.

ಇದೇ ಸಂದರ್ಭ ಸಂಘದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ 2021-22 ನೇ ಸಾಲಿನ ಲಾಭಾಂಶ ವಿಂಗಡನೆಯಲ್ಲಿ 8% ಡಿವಿಡೆಂಡ್ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಹಂತ ಹಂತವಾಗಿ ಸಮಾಜಮುಖಿ ಕೆಲಸ ಮಾಡುತ್ತಿದೆ.  15-18 ಸರಕಾರಿ ಶಾಲೆಗಳಿಗೆ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದು ಮನೆಯಿಲ್ಲದವರಿಗೆ ಮನೆ ಕಟ್ಟಿಕೊಡಲಾಗುತ್ತಿದೆ. ಈಗಾಗಲೇ 8 ಮನೆ ನೀಡಲಾಗಿದೆ. 7 ಮನೆ ನಿರ್ಮಾಣವಾಗುತ್ತಿದೆ. ನೀರಿನ ಕೊರತೆ ಇರುವಲ್ಲಿ ನೀರು ಸರಬರಾಜು ಮಾಡುತ್ತಿದ್ದೇವೆ. ಸಂಸ್ಥೆಯಿಂದ 42 ಮಕ್ಕಳನ್ನು ದತ್ತು ಪಡೆದು, ಅವರ ವಿದ್ಯಾಭ್ಯಾಸದ ಖರ್ಚನ್ನು ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಭರಿಸುತ್ತಿದೆ. ನಾನು ದುಡಿದ ಹಣದಿಂದ ಈ ಎಲ್ಲಾ ಮಾಡುತ್ತಿದ್ದೇನೆ. ಸ್ವಸಹಾಯ ಸಂಘಗಳಿಗೆ ಸಹಾಯ ಮಾಡುವುದು ಪ್ರಮುಖ ಧ್ಯೇಯ. ಮುಂದಿನ ದಿನಗಳಲ್ಲಿ ಬೈಂದೂರು ಭಾಗದಲ್ಲಿ ಸುಸಜ್ಜಿತ ಶಾಲೆ ತೆರೆಯುವ ಯೋಜನೆ ಇದೆ.‌ ಅಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಚನೆ ಇದೆ ಎಂದರು.

ಬಿಸಿಎ ಪದವಿಯಲ್ಲಿ ಚಿನ್ನದ ಪದಕಕ್ಕೆ ಭಾಜನರಾದ ದೀಕ್ಷಾ ಗೋವಿಂದ ಬಾಬು ಪೂಜಾರಿಯವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಸಭೆಗೆ ಆಗಮಿಸಿದ ಸಂಘದ ಸದಸ್ಯ 20 ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನ ನೀಡಲಾಯಿತು.

ಈ ವೇಳೆ ನಿರ್ದೇಶಕರಾದ ಜಯರಾಮ ಶೆಟ್ಟಿ ಬಿಜೂರು, ರಾಘವೇಂದ್ರ ಎಂ. ಪೂಜಾರಿ, ದೇವನ್ ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಆರ್. ಪೂಜಾರಿ ಇದ್ದರು.

ಬೈಂದೂರು ಶಾಖೆಯ ಶಾಖಾಧಿಕಾರಿ ನಾಗರಾಜ ಪಿ. ಯಡ್ತರೆ ಕಾರ್ಯಕ್ರಮ ನಿರೂಪಿಸಿ, ಜಯರಾಮ ಶೆಟ್ಟಿ ಬಿಜೂರು ಸ್ವಾಗತಿಸಿ, ಉಪ್ಪುಂದ ಶಾಖೆಯ ಸಿಬ್ಬಂದಿ ಪ್ರವೀಣ್ ಆಚಾರ್ಯ ವಂದಿಸಿದರು.

Comments are closed.