ಕರ್ನಾಟಕ

40 ಸೆಕೆಂಡಿನಲ್ಲಿ‌ 60 ಬಾರಿ ಇರಿತ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಇಬ್ಬರು ಹಂತಕರ ಬಂಧನ

Pinterest LinkedIn Tumblr

ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿಯವರನ್ನು ಆಪ್ತನಾದ ಮಹಾಂತೇಶ ಶಿರೂರ ಮತ್ತು ಆತನ ಸಹಚರ ಸೇರಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಆರೋಪಿಗಳನ್ನು ಬಧಿಸಲಾಗಿದೆ.‌ 40 ಸೆಕೆಂಡಿನಲ್ಲಿ ಗುರೂಜಿ ಮೇಲೆ 60 ಬಾರಿ ಇರಿಯಲಾಗಿತ್ತು.

ಮಹಾಂತೇಶ್‌ ಹಾಗೂ ಮಂಜುನಾಥ್ ಅವರನ್ನು‌ ಬಂಧಿಸಲಾಗಿದ್ದು, ಮಹಾಂತೇಶ್ ಪತ್ನಿಯನ್ನು ವಶಕ್ಕೆ ಪಡೆಯಲಾಗಿದೆ. ಕೊಲೆ ನಡೆದ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಲಘಟಗಿ ತಾಲೂಕ ಧುಮ್ಮವಾಡ ಗ್ರಾಮದ ಮಹಾಂತೇಶ ಇನ್ನೋರ್ವನ‌ ಜೊತೆ ಸೇರಿ ಬೇನಾಮಿ ಆಸ್ತಿ ವಿಷಯವಾಗಿಯೇ ಕೊಲೆ ಮಾಡಿದ್ದ ಎನ್ನುವುದು ತಿಳಿದುಬಂದಿದ್ದು, ಪೊಲೀಸರು ಆತನ ಪತ್ನಿ ವನಜಾಕ್ಷಿಯನ್ನು ವಶಕ್ಕೆ ಪಡೆದು ವಿಚಾರ ನಡೆಸಿದ್ದು ಕೊಲೆ ನಡೆದ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗುರೂಜಿ ಜು. 2ರಂದು ಹೋಟೆಲ್ ನಲ್ಲಿ ರೂಮ್ ನಂ. 220 ಬುಕ್ ಮಾಡಿದ್ದರು. ಜು. 6ರಂದು ರೂಮ್ ಚೆಕೌಟ್ ಮಾಡುವವರಿದ್ದರು ಎನ್ನಲಾಗಿದೆ.

ಚಂದ್ರಶೇಖರ್ ಗುರೂಜಿ ಅವರು ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಸಿಂಗಾಪುರದಲ್ಲೂ ತಮ್ಮ ಸಂಸ್ಥೆಯ ಶಾಖೆ ತೆರೆದಿದ್ದರು. ತಿಂಗಳಿಗೊಮ್ಮೆ ಸಿಂಗಾಪುರದ ಕಚೇರಿಗೂ ಹೋಗಿ ಅಲ್ಲಿನ ಭಕ್ತರನ್ನು ಭೇಟಿ ಮಾಡಿ ಬರುತ್ತಿದ್ದರು. ಇವರ ಸಂಸ್ಥೆಯಲ್ಲಿ ಸಾವಿರಾರು ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

 

Comments are closed.