ಕರಾವಳಿ

ಉಪ್ಪುಂದದಲ್ಲಿ ಶ್ರೀ ಲಕ್ಷ್ಮೀಆನೆಗಣಪತಿ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಕಂಚಿಕಾನ್ ರಸ್ತೆಯಲ್ಲಿರುವ ಉದ್ಯಮಿ ನೆಲ್ಯಾಡಿ ದಿವಾಕರ ಶೆಟ್ಟಿ ಉಪ್ಪುಂದ ಇವರ ಮಾಲಕತ್ವದ ಶ್ರೀ ಲಕ್ಷ್ಮೀ ಆನೆ ಗಣಪತಿ ಬಹು ಮಹಡಿ ವಾಣಿಜ್ಯ ಸಂಕೀರ್ಣವನ್ನು ಶನಿವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಧಾರ್ಮಿಕ ಆಚರಣೆಗಳಿಂದ ಮಾತ್ರವೇ ಜೀವನದಲ್ಲಿ ಸುಖ ಶಾಂತಿ ಮನಸ್ಸಿಗೆ ನೆಮ್ಮದಿ ಪಡೆಯಲು ಸಾಧ್ಯವಾಗಲಿದೆ. ಅದೇ ರೀತಿಯಲ್ಲಿ ಉದ್ಯಮಿ ದಿವಾಕರ ಶೆಟ್ಟಿ ಸಹ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಯಲ್ಲಿ ಸಾಮಾಜಿಕ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದಾರೆ. ಅವರ ನೂತನ ಸಂಕೀರ್ಣದಿಂದ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಕೆ.ಆರ್.ಎಸ್.ಎಸ್ ಸೊಸೈಟಿ ನಿರ್ದೇಶಕ ಬಿ.ಎಸ್ ಸುರೇಶ ಶೆಟ್ಟಿ, ಉದ್ಯಮಿ ವಾದಿರಾಜ ಶೆಟ್ಟಿ, ಸುಜ್ಞಾನ ಏಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾII ರಮೇಶ ಶೆಟ್ಟಿ, ಗುತ್ತಿಗೆದಾರ ನೆಲ್ಯಾಡಿ ಪ್ರಭಾಕರ ಶೆಟ್ಟಿ, ಯು.ಸಂದೇಶ ಭಟ್, ಉದ್ಯಮಿಗಳಾಸ ಸುಧಾಕರ ಶೆಟ್ಟಿ, ಜಿ ಗೋಕುಲ ಶೆಟ್ಟಿ, ಶರತ್ ಕುಮಾರ ಶೆಟ್ಟಿ, ಗೌರವ ಗಾರ್ಮೆಂಟ್ಸ್ ನ ಸಂತೋಷ್ ಶೆಟ್ಟಿ, ನೇತ್ರಾವತಿ ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಉಪ್ಪುಂದ ಶ್ರೀ ಆನೆ ಗಣಪತಿ ದೇವಾಲಯದಲ್ಲಿ 108 ಕಾಯಿ ಗಣಹೋಮ ನೆರವೇರಿಸಿ ಎಲ್ಲರಿಗೂ ಪ್ರಸಾದ ವಿತರಿಸಲಾಯಿತು.

Comments are closed.