ಕರಾವಳಿ

ಮಲ್ಪೆ ಕಲ್ಮಾಡಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಲಕ್ಷಾಂತರ ರೂ. ನಷ್ಟ

Pinterest LinkedIn Tumblr

ಉಡುಪಿ: ಮಲ್ಪೆ ಸಮೀಪ ಮನೆಯೊಂದರ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾದ ಘಟನೆ ಬುಧವಾರ ರಾತ್ರಿ ಕಲ್ಮಾಡಿಯಲ್ಲಿ ನಡೆದಿದೆ.

ಕಲ್ಮಾಡಿಯ ನಿವಾಸಿ ವಿಠ್ಠಲ್ ಕೋಟ್ಯಾನ್ ಎಂಬವರ ಮನೆಯ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಲ್ಲಿ ಆವರಿಸಿತು. ನಂತರ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿದ್ದಾರೆ. ಕಲ್ಮಾಡಿಯ ಸ್ಥಳೀಯರು ಕೂಡ ಬೆಂಕಿ ನಂದಿಸಲು ಸಹಕರಿಸಿದ್ದಾರೆ.

Comments are closed.