ಕರಾವಳಿ

ಮೂವರು ಮಹಿಳೆಯರ ಜೊತೆಗೂಡಿ ಕಾರಿನಲ್ಲಿ 300 ಕಿಲೋ ಗೋಮಾಂಸ ಸಾಗಾಟ: ಆರೋಪಿಗಳು ಅಂದರ್..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಉಡುಪಿ: ಕುಂದಾಪುರ ಕಡೆಯಿಂದ ಭಟ್ಕಳಕ್ಕೆ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂಪರ ಸಂಘಟನೆಗಳು ನೀಡಿದ ಮಾಹಿತಿ ಆಧರಿಸಿ ಬೆನ್ನತ್ತಿದ ಬೈಂದೂರು ಪೊಲೀಸರು ಒತ್ತಿನಣೆ ಬಳಿ ತಡೆಹಿಡಿದು, ಅಂದಾಜು 3 ಕ್ವಿಂಟಾಲ್ ಗೋಮಾಂಸ ವಶಕ್ಕೆ ಪಡೆದಿದ್ದಾರೆ.

ಕಾರು ಚಾಲಕ ಕುಂದಾಪುರ ಕರ್ಕುಂಜೆ‌ ಮಾವಿನಕಟ್ಟೆಯ ಮೊಹಮ್ಮದ್ ಅಲ್ತಾಫ್ (38), ಹಾಗೂ ಕಾರಿನಲ್ಲಿದ್ದ ಆಲ್ಫಿಯಾ, ನಿಖಾತ್, ಜರೀನಾ ಎಂಬ ಮೂವರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಮುಜಾಫರ್ ಹುಸೇನ್ ಫಕ್ರು ಎನ್ನುವರಿಗೆ ಜಾನುವಾರು ಮಾಂಸ ನೀಡಲು ತೆರಳುತ್ತಿದ್ದರು ಎನ್ನಲಾಗಿದೆ.

ಬೆಂಗಳೂರು ನೊಂದಣಿ ಹೊಂದಿರುವ ಬಾಡಿಗೆ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡಲಾಗಿದ್ದು ಇದೇ ಕಾರಿನಲ್ಲಿ ಮೂವರು ಮಹಿಳೆಯರು ಕೂಡ ಪ್ರಯಾಣಿಸುತ್ತಿದ್ದರು. ಕಾರಿನ ಡಿಕ್ಕಿಯಲ್ಲಿ 60 ಸಾವಿರ ಮೌಲ್ಯದ ಮೂರು ಕ್ವಿಂಟಾಲ್ ಪ್ರಮಾಣದ (300‌ಕೆ.ಜಿ) ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಯಾರಿಗೂ ಸಂಶಯ ಬರಬಾರದು ಎಂಬ ಕಾರಣಕ್ಕೆ ಮೂರು ಮುಸ್ಲಿಂ ಮಹಿಳೆಯರನ್ನು ಇದೇ ವಾಹನದಲ್ಲಿ ಕರೆದೊಯ್ಯಲಾಯಿತ್ತು ಎಂದು ತಿಳಿದುಬಂದಿದೆ. ಅರೊಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಬೈಂದೂರಿನ ಪೊಲೀಸ್ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನಿರ್ದೇಶನದಂತೆ , ಬೈಂದೂರು ಪಿಎಸ್ಐ ಪವನ್ ನಾಯಕ್ ಕಾರ್ಯಾಚರಣೆ ನಡೆಸಿದ್ದಾರೆ. ಪ್ರೊಬೆಷನರಿ ಪಿಎಸ್ಐ ಮಮತಾ ನಾಯಕ್, ಪೊಲೀಸ್ ಕಾನ್ಸ್‌ಟೇಬಲ್, ಅಶೋಕ್ ರಾಥೋಡ್, ಶ್ರೀನಿವಾಸ್, ಸುಜಿತ್ ಕುಮಾರ್, ಸುಧೀರ್ ಪೂಜಾರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.