ಕರಾವಳಿ

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: 1.53 ಕೋಟಿ ರೂ. ಹುಂಡಿ ಹಣ ಸಂಗ್ರಹ

Pinterest LinkedIn Tumblr

ಕುಂದಾಪುರ: ಕೋವಿಡ್‌ ನಿರ್ಬಂಧಗಳ ಸಡಿಲಿಕೆಯ ಬಳಿಕ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದೆ.

ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದ್ದು 1 ಕೋಟಿ 53 ಲಕ್ಷದ 41 ಸಾವಿರ 923 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ.

ಕಳೆದ ಜನವರಿಯಿಂದ ಪ್ರತಿನಿತ್ಯ ಕನಿಷ್ಠ 10 ಸಾವಿರ ಭಕ್ತರು ಆಗಮಿಸುತ್ತಿದ್ದಾರೆ. ಈಗ ಶಾಲೆಗಳಿಗೆ ರಜೆ ಹಿನ್ನೆಲೆ ಭಕ್ತಾಧಿಗಳ ಸಂಖ್ಯೆ ಜಾಸ್ಥಿಯಿದೆ. ದೇಗುಲದಲ್ಲಿ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದ ಹಣ ಸಂಗ್ರಹವಾಗಿರುವುದು ಇದೇ ಮೊದಲ ಬಾರಿಯಾಗಿದೆ.

ಸಾಮಾನ್ಯವಾಗಿ ಪ್ರತೀ ತಿಂಗಳು ಎಣಿಕೆ ನಡೆಯುತ್ತಿದ್ದು, ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು. 4 ತಿಂಗಳ ಹಿಂದೆ ಎಣಿಕೆಯಲ್ಲಿ 1.39 ಕೋಟಿ ರೂ. ಹಣ ಸಂಗ್ರಹವಾಗಿತ್ತು.

Comments are closed.