ಕರಾವಳಿ

ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಪ್ರಮಾಣ 3% ದಿಂದ 7.5% ಹೆಚ್ಚಳಕ್ಕೆ ಹೋರಾಟ ಸಮಿತಿ ಒತ್ತಾಯ: ಕುಂದಾಪುರ ತಹಶಿಲ್ದಾರ್’ಗೆ ಮನವಿ

Pinterest LinkedIn Tumblr

ಕುಂದಾಪುರ: ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಶೇಕಡ 3 ರಿಂದ 7.5 ಕ್ಕೆ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಏನಿದೆ…?
1958ರ ನಂತರ 1961ರಲ್ಲಿ ನಡೆದ ಜನಗಣತಿಯಲ್ಲಿ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1,92,096 ರಷ್ಟಿದ್ದು ಇದು ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡ 0.81 ರಷ್ಟಿರುತ್ತದೆ. ಪರಿಶಿಷ್ಟ ಪಂಗಡದವರ ಜನಸಂಖ್ಯೆ ಮುಂದಿನ 5 ಜನಗಣತಿಯಲ್ಲಿ ಭಾರಿಪ್ರಮಾಣದಲ್ಲಿ ಹೆಚ್ಚಾಗಿ 2011 ರಲ್ಲಿ ಅದು 42,48,987 ಆಗಿರುತ್ತದೆ. ಅಂದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1961 ರ ಜನಗಣತಿಗೆ ಹೋಲಿಸಿದಲ್ಲಿ 22.11 ರಷ್ಟು ಹೆಚ್ಚಾಗಿರುತ್ತದೆ. ಆದರೆ 1958ರಲ್ಲಿ 1,92,096 ರಷ್ಟಿದ್ದ ಜನಸಂಖ್ಯೆಗೆ ನಿಗದಿಯಾಗಿದ ಮೀಸಲಾತಿ ಶೇಕಡ 3ರ ಪ್ರಮಾಣ ಇಂದು ಪರಿಶಿಷ್ಟ ಪಂಗಡದ ಜನಸಂಖ್ಯೆ 42,48,987 ರಷ್ಟು ಹೆಚ್ಚಿದ್ದರೂ ಕೂಡ ಮೀಸಲಾತಿಯ ಪ್ರಮಾಣ ಶೇಕಡ 3 ರಷ್ಟೇ ಇದೆ. ಇದರಿಂದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಅವರ ಪ್ರಾತಿನಿಧ್ಯತೆ ಸಂಬಂದ ಅನೇಕ ವರ್ಷಗಳಿಂದ ದೊಡ್ಡ ಅನ್ಯಾಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಮೀಸಲಾತಿ ಪ್ರಮಾಣವನ್ನೇ ಜನಸಂಖ್ಯೆಗನುಗುಣವಾಗಿ ಶೇಕಡ 7.5ಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಲಾಗಿದೆ.

ಈ ವೇಳೆ ಕುಂದಾಪುರ ತಾಲೂಕಿನ ಕೊರಗ ಸಂಘಟನೆ, ಮರಾಠಿ ನಾಯ್ಕ್ ಸಂಘಟನೆ ಹಾಗೂ
ಮಲೆಕುಡಿಯ ಸಂಘಟನೆಯ ಮುಖಂಡರು ಇದ್ದರು.

Comments are closed.