ಕರಾವಳಿ

ನಾವುಂದದಲ್ಲಿ ಅಕ್ರಮ ಜಾನುವಾರು ಸಾಗಾಟ; ಬೈಂದೂರು ಪೊಲೀಸರಿಂದ ಓರ್ವನ‌ ಬಂಧನ

Pinterest LinkedIn Tumblr

ಕುಂದಾಪುರ: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಬೈಂದೂರು ತಾಲೂಕಿನ ನಾವುಂದ ಗ್ರಾಮದ ಅರೆಹೊಳೆಯಲ್ಲಿ ಸ್ಥಳೀಯರು ಪತ್ತೆ ಮಾಡಿದ್ದು ಬೈಂದೂರು ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ.

ಆರೋಪಿ ರವೀಂದ್ರ ಪೂಜಾರಿ ಮಹೀಂದ್ರ ಮ್ಯಾಕ್ಸಿಮೋ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ. ಬೆಳಗ್ಗೆ ಹಳಗೇರಿಯಿಂದ 2 ದನ ಹಾಗೂ ಮುಳ್ಳಿಕಟ್ಟೆಯಿಂದ 2 ದನಗಳನ್ನು ಸಾಗಾಟ ಮಾಡಿದ್ದು ನಾವುಂದ ಜಲೀಲ್ ಹೇಳಿದಂತೆ ತಾನು ಸಾಗಾಟ ಮಾಡಿದ್ದಾಗಿ ಆರೋಪಿ ವಿಚಾರಣೆ ತಿಳಿಸಿದ್ದಾನೆ.

ಸುಧಾಕರ ಶೆಟ್ಟಿ ನೆಲ್ಯಾಡಿ, ವೇದನಾಥ ಶೆಟ್ಟಿ, ದಿನೇಶ್ ಪೂಜಾರಿ ಮತ್ತಿತರರು ನೀಡಿದ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.