ಉಡುಪಿ: ಕೊರಗಜ್ಜನಿಗೆ ಅವಮಾನ ಆಗುವ ರೀತಿಯಲ್ಲಿ ವರ್ತಿಸಿರುವ ಈದುವಿನ ರವೀಂದ್ರ ಎನ್ನುವಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಟಸ್ ಹಾಕಿದ್ದ ಈದು ಗ್ರಾಮದ ಚೇತನ್ ರವರ ಸ್ನೇಹಿತ ಯೋಗೀಶ್ ಅವರ ಮೊಬೈಲಿಗೆ ಒಂದು ಸ್ಟೇಟಸ್ ಬಂದಿತ್ತು. ಅದರಲ್ಲಿ ಈದುವಿನ ರವೀಂದ್ರ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವುದು ಕಂಡುಬಂದಿತ್ತು. ರವೀಂದ್ರ ತನ್ನ ಮೊಬೈಲಿನಲ್ಲಿ ಸ್ವಾಮಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದ.
ಕೊರಗಜ್ಜ ದೈವದ ಅವಹೇಳನ ಮಾಡಿರುವುದು ಧಾರ್ಮಿಕ ಭಾವನೆಗೆ ನೋವಾಗುವ ರೀತಿಯಲ್ಲಿದ್ದ ಕಾರಣ ಸ್ನೇಹಿತ ಯೋಗೀಶನ ಮೊಬೈಲ್ ನಿಂದ ಚೇತನ್ ರವರು ರವೀಂದ್ರನ ಮೊಬೈಲ್ ಗೆ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಏನಾಯ್ತು, ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದ ಎನ್ನಲಾಗಿದೆ.
ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿದ ಬಗ್ಗೆ ಚೇತನ್ ನೀಡಿದ ದೂರಿನಂತೆ ಆರೋಪಿ ರವೀಂದ್ರನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.