ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್ ಇಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಇಂದು ದೆಹಲಿಯ ಬಿಜೆಪಿ ಕಚೇರಿಯಲ್ಲಿ ಡೆಪ್ಯೂಟಿ ಸಿಎಂ ಕೇಶವ್ ಪ್ರಸಾದ್ ಮೌರ್ಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಸಮ್ಮುಖದಲ್ಲಿ ಅವರಿಗೆ ಹೂಗುಚ್ಛ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಅಪರ್ಣಾ ಯಾದವ್ ಬಿಜೆಪಿ ಸೇರುವ ಬಗ್ಗೆ ಹಲವು ದಿನಗಳಿಂದಲೂ ವದಂತಿಗಳಿದ್ದವು. ಸದ್ಯ ಅವರು ಅಧಿಕೃತವಾಗಿ ಸಮಾಜವಾದಿ ಪಕ್ಷವನ್ನು ತೊರೆದು ಕಮಲ ತೆಕ್ಕೆಗೆ ಬಂದಿದ್ದು ಅಖಿಲೇಶ್ ಬಳಗಕ್ಕೆ ಭಾರೀ ಮುಖಭಂಗವಾಗಿದೆ.
ಮಾಜಿ ಮುಖ್ಯಮಂತ್ರಿ ಮುಲಾಯಮ್ ಸಿಂಗ್ ಯಾದವ್ರ ಎರಡನೇ ಹೆಂಡತಿ ಸಾಧನಾ ಗುಪ್ತಾರ ಸೊಸೆಯಾಗಿರುವ ಅಪರ್ಣಾ ಈ ಹಿಂದಿನಿಂದಲೂ ಬಿಜೆಪಿಯ ಪರ ಒಲವನ್ನ ವ್ಯಕ್ತಪಡಿಸಿದ್ದರು. ಆರ್ಟಿಕಲ್ 370, ರಾಮ ಮಂದಿರ ನಿರ್ಮಾಣಕ್ಕೆ 11 ಲಕ್ಷ ದೇಣಿಗೆ ನೀಡುವ ಕ್ರಮಗಳನ್ನು ಸೇರಿ ಬಿಜೆಪಿಯ ಹಲವು ವಿಚಾರಗಳನ್ನು ಅವರು ಸ್ವಾಗತಿಸಿದ್ದರು.
ಇತ್ತೀಚಿಗೆ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಿ ಯೋಗಿ ಆದಿತ್ಯಾನಾಥ್ಗೆ ಶಾಕ್ ನೀಡಿದ್ದರು. ಈ ಬೆಳವಣಿಗೆಗಳ ನಡುವೆಯೇ ಯಾದವ್ ಕುಟುಂಬದ ಸದಸ್ಯರೇ ಕೇಸರಿ ಪಾಳಯಕ್ಕೆ ಲಗ್ಗೆ ಇಟ್ಟು ಎಸ್ಪಿಗೆ ಶಾಕ್ ನೀಡಿದ್ದಾರೆ.
ನವದೆಹಲಿಯಲ್ಲಿ ಭಾರತೀಯ ಜನತಾ ಪಾರ್ಟಿಗೆ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇತರ ಹಿರಿಯ ಬಿಜೆಪಿ ನಾಯಕರ ಸಮ್ಮುಖದಲ್ಲಿ ಸೇರ್ಪಡೆಗೊಂಡರು.
Comments are closed.