ಕರಾವಳಿ

ಜನರಿಗೆ ಉಪಟಳ ಕೊಡಬೇಡಿ ಎಂದಿದ್ದಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ ಕಿಡಿಗೇಡಿಗಳು..!

Pinterest LinkedIn Tumblr

ಉಡುಪಿ: ಪರ್ಯಾಯ ಮಹೋತ್ಸವದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಜೊತೆ ತಗಾದೆಗಿಳಿದು ಉರುಳಾಟ ನಡೆಸಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ರಥಬೀದಿಯ ಕಾಣಿಯೂರು ಮಠದ ಎದುರು ಜ.17ರಂದು ರಾತ್ರಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಜನರಿಗೆ ಕೀಟಲೆ ನೀಡುತ್ತಿದ್ದ ಇಬ್ಬರಿಗೆ ಉಡುಪಿ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚೇತನ್ ಎಸ್., ತೊಂದರೆ ಕೊಡಬಾರದೆಂದು ತಿಳಿಸಿದರು.

ಇದಕ್ಕೆ ದುಷ್ಕರ್ಮಿಗಳು ನೀನು ಯಾವ ಪೊಲೀಸ್ ನಮಗೆ ನೀನು ಹೇಳುವುದು ಬೇಡ ಎಂದು ಹೇಳಿ ಕರ್ತವ್ಯದಲ್ಲಿದ್ದ ಚೇತನ್‌ರನ್ನು ದೂಡಿದ್ದಾರೆ. ಇದರಿಂದ ನೆಲದ ಮೇಲೆ ಕವಚಿ ಬಿದ್ದ ಅವರೊಂದಿಗೆ ಉರುಳಾಟ ನಡೆಸಿದ್ದು ಇದರ ಪರಿಣಾಮ ಚೇತನ್ ಗಾಯಗೊಂಡರೆಂದು ತಿಳಿದುಬಂದಿದೆ.

ಈ ಬಗ್ಗೆ ಚೇತನ್ ನೀಡಿದ ದೂರಿನಂತೆ ದುಷ್ಕರ್ಮಿಗಳ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments are closed.