ಕರಾವಳಿ

20 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯ ಬಂಧನ

Pinterest LinkedIn Tumblr

ಮಂಗಳೂರು: ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿಯನ್ನು ಮಂಗಳೂರು ಉತ್ತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಬಜಗೋಳಿ ನಿವಾಸಿ ಝಕಾರಿಯಾ ಬಂಧಿತ ಆರೋಪಿ.

ಮಂಗಳೂರು ಉತ್ತರ ಪೊಲೀಸು ಠಾಣೆಯಲ್ಲಿ 2000 ನೇ ಇಸವಿಯಲ್ಲಿ ದಾಖಲಾದ CR.NO: 167/2000 U/S 39(3) (a)R/w 51 of Wild Life Act 1972 ನೇ L.P.C ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಝಕಾರಿಯಾ ಎಂಬಾತನನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಇವರ ಮಾರ್ಗದರ್ಶನದಂತೆ ಠಾಣಾ ಸಹಾಯಕ ಪೊಲೀಸು ಉಪ ನಿರೀಕ್ಷಕ ಓಂದಾಸ್ ಇವರು ಸತತ ಮಾಹಿತಿ ಸಂಗ್ರಹಿಸಿ ಜೊತೆಗೆ ಠಾಣಾ ಪೊಲೀಸ್ ಕಾನ್‌ ಸ್ಟೇಬಲ್ ಸಂಪತ್ ಇವರೊಂದಿಗೆ ವಶಕ್ಕೆ ಪಡೆದಿರುತ್ತಾರೆ. ಆರೋಪಿತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

20 ವರ್ಷಗಳಿಂದ ತಲೆಮರೆಸಿಕೊಂಡಿರುವ ಆರೋಪಿತನನ್ನು ಪತ್ತೆ ಮಾಡಿದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ಇವರಿಗೆ ಮತ್ತು ಠಾಣಾ ಸಹಾಯಕ ಪೊಲೀಸು ಉಪ ನಿರೀಕ್ಷಕ ಓಂದಾಸ್ ಹಾಗು ಪೊಲೀಸು ಕಾನ್‌ ಸ್ಟೇಬಲ್ ಸಂಪತ್ ಇವರುಗಳಿಗೆ ‌ ನಗರ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Comments are closed.