ಕರಾವಳಿ

ಪೊಡವಿಗೊಡೆಯನ ನಾಡಲ್ಲಿ ಪರ್ಯಾಯಕ್ಕೆ ಕೆಲವೇ ಕ್ಷಣಗಳು ಬಾಕಿ; ಸಿಂಗಾರಗೊಂಡಿದೆ ಶ್ರೀ ಕೃಷ್ಣನಗರಿ

Pinterest LinkedIn Tumblr

(ಯೋಗೀಶ್ ಕುಂಭಾಸಿ, ಉಡುಪಿ)

ಉಡುಪಿ: ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ಪರ್ಯಾಯೋತ್ಸವ ನಡೆಯಲಿದೆ ಎನ್ನಲಾಗಿದೆ. ಆದರೂ ಕೂಡ ಸಾರ್ವಜನಿಕರು, ಭಕ್ತರು ಸೇರುವುದು ಖಚಿತ. ಕೊರೋನಾ ನಿಯಮ ಪಾಲನೆಯ ಸೂಚನಾ ಫ‌ಲಕಗಳನ್ನು ಶ್ರೀಕೃಷ್ಣ ಮಠದ ಸುತ್ತಲೂ ಅಳವಡಿಸಲಾಗಿದೆ. ಇನ್ನು ಪರ್ಯಾಯದ ಅಂಗವಾಗಿ ಉಡುಪಿ ರಥಬೀದಿ ಸಹಿತ ನಗರ ಭರ್ಜರಿಯಾಗಿ ಸಿಂಗಾರಗೊಂಡಿದೆ.

ಶ್ರೀ ಕೃಷ್ಣಾಪುರ ಮಠದ ಪರ್ಯಾಯೋತ್ಸವ ಸಮಿತಿ ಹಾಗೂ ಜಿಲ್ಲಾಡಳಿತದ ನಡುವೆ ಈಗಾಗಲೇ ಹಲವು ಸುತ್ತಿನ ಚರ್ಚೆಗಳು ನಡೆದಿವೆ. ಸಮಿತಿಯಿಂದ ರಥಬೀದಿ, ರಾಜಾಂಗಣ, ಶ್ರೀಕಷ್ಣ ಮಠದ ಒಳಗಡೆ ಹೀಗೆ ಸುತ್ತಲೂ ಕೊರೊನಾ ಮುನ್ನೆಚ್ಚರಿಕೆಗೆ ಸಂಬಂಧಿಸಿದ ಸೂಚನ ಫ‌ಲಕಗಳನ್ನು ಅಳ ವಡಿಸಲಾಗಿದೆ. ಇದರ ಆಧಾರ ದಲ್ಲಿಯೇ ಸಾರ್ವಜನಿಕರು, ಭಕ್ತರು ನಿಯಮಗಳನ್ನು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದಲೇ ಪಾಲಿಸ ಬೇಕು. 2 ಡೋಸ್‌ ಹಾಕಿ ಕೊಂಡವರು ಮಾತ್ರ ಉತ್ಸವಕ್ಕೆ ಬರಬೇಕು. ಜ್ವರ, ಶೀತ, ಕೆಮ್ಮು ಮೊದಲಾದ ರೋಗ ಲಕ್ಷಣ ಇರುವವರು ಬರು ವುದು ಬೇಡ ಎಂದು ಸಮಿತಿ ಈಗಾಗಲೇ ಮನವಿ ಮಾಡಿ ಕೊಂಡಿದೆ. ಅದರಂತೆ ಸಾರ್ವಜನಿಕರು ಅನುಸರಿಸುವುದು ಅತಿಮುಖ್ಯವಾಗಿದೆ.

ರಥಬೀದಿಯಲ್ಲಿ ಕೊರೊನಾ ಲಸಿಕೆ ಕೇಂದ್ರ ಮತ್ತು ಪ್ರಥಮ ಚಿಕಿತ್ಸಾ ಘಟಕವನ್ನು ತೆರೆಯಲಾಗಿದೆ. ಮಠಕ್ಕೆ ಬರುವವರು ಲಸಿಕೆ ಪಡೆಯಲು ಅನುಕೂಲ ಆಗುವಂತೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಈ ವ್ಯವಸ್ಥೆ ಮಾಡ ಲಾಗಿದೆ. ಜತೆಗೆ ತುರ್ತು ಚಿಕಿತ್ಸೆ ಮತ್ತು ಆ್ಯಂಬುಲೆನ್ಸ್‌ ಸಿದ್ಧಪಡಿಸಿಕೊಳ್ಳಲಾಗಿದೆ.

Comments are closed.