ಕರ್ನಾಟಕ

ಸರಕಾರದ ನೈಟ್ ಕರ್ಫ್ಯೂ ಆದೇಶದ ಬಗ್ಗೆ ವ್ಯಾಖ್ಯಾನಿಸುವುದಿಲ್ಲ: ಸಿ.ಟಿ ರವಿ ಮಾರ್ಮಿಕ ಮಾತು..!

Pinterest LinkedIn Tumblr

ಬೆಂಗಳೂರು: ಓಮಿಕ್ರಾನ್ ಭೀತಿಯಿಂದಾಗಿ ರಾಜ್ಯದಲ್ಲಿ ಡಿ.28ರಿಂದ 10ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ.ರವಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನೈಟ್ ಕರ್ಫ್ಯೂ ಆದೇಶ ಸರಿ-ತಪ್ಪು ಬಗ್ಗೆ ವ್ಯಾಖ್ಯಾನಿಸಲಾಗಲ್ಲ. ಓಮಿಕ್ರಾನ್​ಗೆ ಭಯಪಡಬೇಕಿಲ್ಲವೆಂದು ವಿಜ್ಞಾನಿಗಳೇ ಹೇಳಿದ್ದಾರೆ. ಮೂಗು ಇರುವವರಿಗೆ ನೆಗಡಿ ತಪ್ಪಿದ್ದಲ್ಲ. ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಜನರನ್ನ ಅನಗತ್ಯ ಭಯಕ್ಕೆ ಒಳಪಡಿಸಬಾರದು. ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ, ಆದರೆ ಎಚ್ಚರವಹಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಂಗಳವಾರದಿಂದ ನೈಟ್ ಕರ್ಫ್ಯೂ ಜಾರಿಗೊಂಡಿದ್ದು, ಸುಮಾರು 10 ದಿನಗಳ ಕಾಲ ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 5 ಗಂಟೆ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

Comments are closed.