ಕರಾವಳಿ

ಪಾದಚಾರಿ ಯುವತಿಗೆ ಲೈಂಗಿಕ ಕಿರುಕುಳ- ತಲಪಾಡಿಯಲ್ಲಿ ಸಾರ್ವಜನಿಕರಿಂದ ಆರೋಪಿಗೆ ಗೂಸಾ..!

Pinterest LinkedIn Tumblr

ಮಂಗಳೂರು: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿತ್ತಿದ್ದ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಉಳ್ಳಾಲ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ನಡೆದಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫ(18) ಬಂಧಿತ ಆರೋಪಿ.

ಈತ ಕಳೆದ ಶನಿವಾರ ಸ್ಕೂಟರ್ ನಲ್ಲಿ ಬಂದಿದ್ದ ಯುವಕನೋರ್ವ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಸ್ಥಳೀಯರು ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದು ಆತನಿಗಾಗಿ ಕಾದು ಕುಳಿತಿದ್ದರು.

ವಾರದ ಹಿಂದೆ ಕಿರುಕುಳ ನೀಡಿ ಪರಾರಿಯಾಗಿ ಶನಿವಾರ ಮತ್ತೆ ಆರೋಪಿ ಮುಸ್ತಫ ಸ್ಕೂಟರಿನಲ್ಲಿ ಬಂದಿದ್ದು ತಲಪಾಡಿ ಶ್ರೀರಾಮ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದನೆನ್ನಲಾಗಿದೆ. ಈ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕಳೆದೊಂದು ವಾರದಲ್ಲಿ ನಡೆದ ಈ ಎರಡು ಕಿರುಕುಳ ಕೃತ್ಯವನ್ನು ಆರೋಪಿ ಮುಸ್ತಫ ಎಸಗಿದ್ದನೆನ್ನಲಾಗಿದ್ದು, ಈ ಬಗ್ಗೆ ಸಂತ್ರಸ್ತೆ ಯುವತಿಯರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪೊಕ್ಸೋ ಸಹಿತ ಎರಡು ಪ್ರಕರಣಗಳು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Comments are closed.