ಕರ್ನಾಟಕ

ಅಪ್ರಾಪ್ತ ಮಕ್ಕಳ ಮೂಲಕ‌ ಬೈಕ್ ಕಳವು‌ ಮಾಡಿಸುತ್ತಿದ್ದ ಬೆಂಗಳೂರಿನ ಕಿಲಾಡಿ ಪೊಲೀಸ್ ಪೇದೆ..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನಲ್ಲಿ ಪೊಲೀಸ್ ಪೇದೆಯೋರ್ವ ಕಳ್ಳತನದಂತಹ ಕುಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಂಡಿರುವ ಕುಕೃತ್ಯ ವರದಿಯಾಗಿದೆ. ಈ ಪೇದೆ ಅಪ್ರಾಪ್ತ ಮಕ್ಕಳ ಮೂಲಕ ಬೈಕ್ ಕಳ್ಳತನದ ದಂಧೆಯನ್ನು ನಡೆಸುತ್ತಿದ್ದು ಸಿಕ್ಕಿಬಿದ್ದಿದ್ದಾನೆ.

ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಪೇದೆ ಹೊನ್ನಪ್ಪ ಬಂಧಿತ ಪೊಲೀಸ್ ಪೇದೆ. ಈತನ ಕುಮ್ಮಕ್ಕಿನಿಂದಾಗಿ ಅಪ್ರಾಪ್ತರು ಕಳವು ಮಾಡಿದ 77ಲಕ್ಷದ 53 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊನ್ನಪ್ಪ ಬೆಂಗಳೂರು, ಹಾವೇರಿ ಸೇರಿ ವಿವಿಧ ಕಡೆ ಅಪ್ರಾಪ್ತರನ್ನು ಬಳಕೆ ಮಾಡಿಕೊಂಡು ಬೈಕ್ ಕಳ್ಳತನ ಮಾಡಿಸುತ್ತಿದ್ದ. ಬಳಿಕ ಬೈಕ್ ನ್ನು ಮಾರಾಟ ಮಾಡಿ ಅವರಿಗೆ 5-6 ಸಾವಿರ ಕೊಟ್ಟು ಉಳಿದ ಹಣವನ್ನು ತಾನೇ ಜೇಬಿಗಿಳಿಸುತ್ತಿದ್ದ.

ಇದೀಗ ಆರೋಪಿ ಪೇದೆಯನ್ನು ಬಂಧಿಸಿದ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.