ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿದೆ. ಪೊಲೀಸರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಗಾಂಜಾದಂತಹ ಮಾಧಕ ವಸ್ತುಗಳ ಕ್ರಯ-ವಿಕ್ರಯ ಜಾಲ ಎಗ್ಗಿಲ್ಲದೆ ದಂಧೆ ನಡೆಸುತ್ತಿದೆ. ಹೊಸ ವರ್ಷದ ಪಾರ್ಟಿ ನಡೆಸಲು ಗಾಂಜಾ ತರುತ್ತಿದ್ದ ಓರ್ವ ಯುವಕನನ್ನು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.

ಕುಂದಾಪುರ ವಿಠಲವಾಡಿ ಮೂಲದ ವಿಶ್ವಪ್ರಸನ್ನ ಗೋಡೆ (26) ಬಂಧಿತ ಆರೋಪಿ. ಈತನಿಂದ 1 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

(ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ.)

ನ್ಯೂ ಇಯರ್ ಪಾರ್ಟಿಗೆ ಗಾಂಜಾ..!
ಹೊಸ ವರ್ಷಕ್ಕೆ ನಾಲ್ಕೈದು ದಿನಗಳು ಬಾಕಿಯಿದೆ. ಈ ವೇಳೆ ಮೋಜುಮಸ್ತಿ ಮಾಡುವ ಸಲುವಾಗಿ ಹೈದರಾಬಾದ್ನಿಂದ ಕುಂದಾಪುರಕ್ಕೆ ಬಸ್ ಮೂಲಕವಾಗಿ ಗಾಂಜಾ ತರುತ್ತಿದ್ದ ಬಗ್ಗೆ ಕುಂದಾಪುರ ಡಿವೈಎಸ್ಪಿ ಅವರಿಗೆ ಖಚಿತ ಮಾಹಿತಿ ಲಭಿಸಿದೆ. ಡಿ.24 ತಡರಾತ್ರಿ ಬಸ್ರೂರು ಮೂರುಕೈ ಸಮೀಪ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ವಿಶ್ವಪ್ರಸನ್ನನನ್ನು ವಶಕ್ಕೆ ಪಡೆದು ಆತನಿಂದ ಮಾರಾಟಕ್ಕಾಗಿ ತಂದಿದ್ದ 1 ಕಿಲೋ ಗ್ರಾಂ ತೂಕದ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Comments are closed.