ಪ್ರಮುಖ ವರದಿಗಳು

ಗೋವು ನಮಗೆ ತಾಯಿ, ಪವಿತ್ರ: ಕೆಲವರಿಗೆ ಇದರ ಅರಿವಿಲ್ಲ- ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ವಾರಣಾಸಿ: ಕೋಟ್ಯಂತರ ಜನರ ಜೀವನವು ಜಾನುವಾರುಗಳ ಮೇಲೆ ಅವಲಂಬಿತವಾಗಿದೆ ಎನ್ನುವ ಸೂಕ್ಷ್ಮ ವಿಚಾರವು ಕೆಲವರಿಗೆ ತಿಳಿದಿರುವುದಿಲ್ಲ. ಗೋವು ನಮಗೆ ತಾಯಿ ಮತ್ತು ಪವಿತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಣಾಸಿಯಲ್ಲಿ 2095 ಕೋಟಿ ರೂಪಾಯಿ ವೆಚ್ಚದ 27 ಯೋಜನೆಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ವಾರಣಾಸಿಗೆ ಒಂದೇ ವಾರದಲ್ಲಿ ಎರಡನೇ ಬಾರಿ ಭೇಟಿಯಾಗುತ್ತಿದ್ದೇನೆ. ಈ ಯೋಜನೆಗಳಲ್ಲಿ ಬನಾಸ್ ಡೈರಿ ಸಂಕುಲ್ ಯೋಜನೆಯೂ ಸೇರಿದೆ. ಈ ಡೈರಿಯು ದಿನಕ್ಕೆ 5 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದ್ದು, 30 ಎಕರೆ ಪ್ರದೇಶದಲ್ಲಿ ಅಂದಾಜು 475 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.

ಗೋವು ನಮಗೆ ತಾಯಿ ಸಮಾನ.‌ ಪವಿತ್ರ ಎಂದು ಪೂಜೆ ಮಾಡುತ್ತೇವೆ. ಆದರೆ ಹೀಗೆ ಹೇಳಿದರೆ ಕೆಲವರಿಗೆ ಅಪರಾಧ ಎನಿಸುತ್ತದೆ. ಅವರಿಗೆ ಕೋಟ್ಯಂತರ ಜನರ ಜೀವನ ಗೋವುಗಳ ಮೇಲೆ ಅವಲಂಬಿತವಾಗಿರುವುದು ತಿಳಿಯುವುದಿಲ್ಲ ಎಂದು ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸುವ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

Comments are closed.