ಕರಾವಳಿ

ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ನೀಡಿದ ತಂದೆಗೆ 10 ಸಾವಿರ ದಂಡ ವಿಧಿಸಿದ ಕೋರ್ಟ್‌

Pinterest LinkedIn Tumblr

ಸುಳ್ಯ: ಅಪ್ರಾಪ್ತ ಮಕ್ಕಳಿಗೆ ಪೋಷಕರು ವಾಹನಗಳನ್ನು ಚಲಾಯಿಸಲು ಕೀ ಕೊಟ್ಟರೆ ದಂಡ ತೆರಲು ಸಿದ್ಧರಾಗಿರಲೇಬೇಕು. ಈ ಬಗ್ಗೆ ನ್ಯಾಯಾಲಯ ಇತ್ತೀಚೆಗೆ ಕೆಲವು ಘಟನೆಗಳಲ್ಲಿ ಪೋಷಕರಿಗೆ ದಂಡ ವಿಧಿಸಿದ ಪ್ರಸಂಗಗಳು ನಡೆದಿದ್ದು ಇದೇ ರೀತಿಯ ಘಟನೆ ಸುಳ್ಯದಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಸುಳ್ಯ ತಾಲೂಕಿನ ದೇವಚಳ್ಳದ ಅಪ್ರಾಪ್ತ ಬಾಲಕನೋರ್ವ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಪೋಷಕರಿಗೆ 10,000 ರೂ. ದಂಡ ವಿಧಿಸಿದೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಸುರೇಶ ಎನ್ನುವವರು ತನ್ನ ಅಪ್ರಾಪ್ತ ಮಗನಿಗೆ ದ್ವಿಚಕ್ರ ವಾಹನ ಚಲಾಯಿಸಲು ಕೀ ನೀಡಿದ್ದರು. ಈ ಕುರಿತು ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಸುಳ್ಯ ಸಿಜೆ ಹಾಗೂ ಜೆಎಂಎಫ್‌‌ಸಿ ನ್ಯಾಯಾಲಯ ಬಾಲಕನ ಪೋಷಕರಿಗೆ 10,000 ರೂ. ದಂಡ ವಿಧಿಸಿದೆ.

Comments are closed.