ಮಂಗಳೂರು: ಮಾಲಾಡಿ ಗ್ರಾಮ ಪಂಚಾಯತ್ ಪಿಡಿಒ ತನ್ನ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ತಂಡಕ್ಕೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ಘಟನೆ ಡಿ.13 ಸೋಮವಾರ ನಡೆದಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ವ್ಯಕ್ತಿಯೋರ್ವರಿಂದ ಪಂಚಾಯತ್ ಆಸ್ತಿ ದಾಖಲೆ ಇ ಸ್ವತ್ತು 9 ಮತ್ತು 11 ಎ ನಮೂನೆಯನ್ನು ಮಾಡಲು 15,000 ರೂ. ಲಂಚ ಸ್ವೀಕರಿಸುತ್ತಿರುವ ವೇಳೆ ದಿಢೀರ್ ದ.ಕ.ಭ್ರಷ್ಟಾಚಾರ ನಿಗ್ರಹ ದಳ ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಪಿಡಿಒ ರವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
Comments are closed.