ಕರ್ನಾಟಕ

ವಿಶ್ವವಿಖ್ಯಾತ ಜೋಗ ಜಲಪಾತವನ್ನು ವೀಕ್ಷಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Pinterest LinkedIn Tumblr

ಶಿವಮೊಗ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಗುರುವಾರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಭೇಟಿ ನೀಡಿ, ಜಲಪಾತದ ಧುಮ್ಮಿಕ್ಕುವ ನಯನಮನೋಹರ ದೃಶ್ಯವನ್ನು ಆಸ್ವಾಧಿಸಿ ಖುಷಿಪಟ್ಟರು.

ಜೋಗ ಜಲಪಾತ, ಶರಾವತಿ ಕಣಿವೆ ಬಗ್ಗೆ ರಾಜ್ಯಪಾಲರು ಮಾಹಿತಿ ಪಡೆದುಕೊಂಡರು. ರಾಜ್ಯಪಾಲರಿಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಎಸ್ಪಿ ಡಾ. ಸುಮನ್ ಡಿ ಪನ್ನೇಕರ್, ಕುಮುಟಾ ಎಸಿ ರಾಹುಲ್ ಪಾಂಡೆ ಜೋಗದ ಮಾಹಿತಿ ನೀಡಿದರು.

ರಾಜ್ಯಪಾಲರಾದ ಥಾವರ್ ಛಂದ್ ಗೆಹ್ಲೋಟ್ ಅವರು ಬುಧವಾರದಿಂದ ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದಾರೆ. ಬುಧವಾರ ಪೆಸಿಟ್ ಕಾಲೇಜು ಹಾಗೂ ಶಿವಮೊಗ್ಗದ ಹುಲಿ-ಸಿಂಹಧಾಮಕ್ಕೆ ಭೇಟಿ ನೀಡಿದ ಬಳಿಕ ರಾತ್ರಿ ಜೋಗದ ಬ್ರಿಟಿಷ್ ಬಂಗ್ಲೋ ನಲ್ಲಿ ವಾಸ್ತವ್ಯ ಹೂಡಿದ್ದರು.

 

Comments are closed.